ದಾವಣಗೆರೆ: ಆಕೆಗಿನ್ನು ಎರಡೂವರೆ ವರ್ಷ. ಆಕೆ ಜ್ಞಾನ ಭಂಡಾರಕ್ಕೆ ಸೈ ಅನ್ನೋದವರಿಲ್ಲ. ಪಟಪಟ ಹೇಳಲು ಶುರು ಮಾಡಿದರೆ ರಾಷ್ಟ್ರ ನಾಯಕರು, ರಾಜ್ಯ ನಾಯಕರು ಸೇರಿದಂತೆ ಹೆಸರುಗಳ ಲೀಲಾಜಾಲವಾಗಿ ಬರುತ್ತವೆ. ಯಾರು ಈ ವೆರಿ ವೆರಿ ಟ್ಯಾಲೆಂಟ್ ಗರ್ಲ್ ಅನ್ನೋದನ್ನು ತೋರಿಸ್ತೀವಿ ನೋಡಿ.
ದೇಶದ ನಾಯಕರು, ವಾಹನಗಳ ಹೆಸರನ್ನು ಹೇಳ್ತಿರುವ ಈ ಬಾಲೆ ಹೆಸರು ಸುಕೃತಿ. ಚಿಕ್ಕ ವಯಸ್ಸಿನಲ್ಲೇ ಬಾಲಕಿಯ ಅಪಾರ ಜ್ಞಾನ ಶಕ್ತಿಗೆ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೈ ಹೋ ಎನ್ನುತ್ತಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯ ಶ್ರೀನಿವಾಸ್ ಮತ್ತು ರಶ್ಮಿ ರಾಣಿ ದಂಪತಿಯ ಪುತ್ರಿ ಸುಕೃತಿ ಈ ಸಾಧನೆ ಮಾಡಿರುವ ಬಾಲಕಿ. ಎರಡೂವರೆ ವರ್ಷದ ಈ ಬಾಲೆ ಈಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ , ಕರ್ನಾಟಕ ಬುಕ್ ಆಫ್ ಅಚೀವರ್ಸ್ ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಮಗಳ ಅಪಾರ ಜ್ಞಾನ ಶಕ್ತಿಯನ್ನ ಗಮನಿಸಿದ ಸುಕೃತಿ ತಂದೆ ಶ್ರೀನಿವಾಸ್, ಪುತ್ರಿಯ ವಿಡಿಯೋವನ್ನ ಇಂಡಿಯನ್ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಅಚೀವರ್ಸ್ ಗೆ ಕಳುಹಿಸಿದ್ದರು. ಈ ಮಗುವಿನ ವಿಡಿಯೋ ಗಮನಿಸಿದ ಶಾರ್ಫ್ ಮೆಮೋರಿ ಕಿಡ್ ಕೂಟಾದಲ್ಲಿ ಸುಕೃತಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಚಿಕ್ಕ ವಯಸ್ಸಿನಲ್ಲೇ ಪುತ್ರಿಯ ಈ ಸಾಧನೆ ಗಮನಿಸಿದ ಶ್ರೀನಿವಾಸ್ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
PublicNext
26/01/2021 06:15 pm