ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚಿತ್ರ ಮರಿಗೆ ಜನ್ಮವಿತ್ತ ಮೇಕೆ! ಇದು ದೈವ ಆಶೀರ್ವಾದ ಎಂದ ಮಾಲೀಕ

ಲಖನೌ (ಉತ್ತರ ಪ್ರದೇಶ): ಮೇಕೆಯೊಂದು ವಿಚಿತ್ರ ಮರಿಗೆ ಜನ್ಮ ನೀಡಿದೆ. ಅದಕ್ಕೆ ಮೂಗು ಇಲ್ಲ. ದೊಡ್ಡ ತಲೆ, ಒಂದಕ್ಕೊಂದು ಹೊಂದಿಕೊಂಡ ಕಣ್ಣುಗಳು, ತಿರುಚಿದ ಬಾಯಿ ಹಾಗೂ ಸ್ವಲ್ಪ ನಾಲಗೆ ಹೊರಚಾಚಿದಂತಿದೆ‌‌. ಈ ವಿಚಿತ್ರ ಮರಿಯನ್ನು ನೋಡಲು ಅಕ್ಕಪಕ್ಕದ ಜನ ಜಮಾಯಿಸುತ್ತಿದ್ದಾರೆ‌.

ಲಖನೌ ಸಮೀಪದ ಮೊರಾಹತ್ ಗ್ರಾಮದ ನಿವಾಸಿ ಮಾಸಿಯಾ ಎಂಬುವವರ ಮನೆಯಲ್ಲಿ ಈ ವಿಚಿತ್ರ ಮರಿ ಜನಿಸಿದೆ.‌ ಮಾಸಿಯಾ ಅವರ ಮೇಕೆ ಇತ್ತೀಚೆಗೆ ಎರಡು ಮರಿ ಹಾಕಿತ್ತು ಅದರಲ್ಲಿ ಒಂದು ಮರಿ ಸ್ವಾಭಾವಿಕವಾಗಿದ್ದು ಇನ್ನೊಂದು ಈ ರೀತಿ ವಿಚಿತ್ರವಾಗಿದೆ. ಇದು ಶಿವನ ಮೂರನೇ ಕಣ್ಣು ಎಂದು ನಂಬಿದ ಸ್ಥಳೀಯರು ವಿಚಿತ್ರ ಮೇಕೆ ಮರಿ ನೋಡಲು ಮುಗಿ ಬಿದ್ದಿದ್ದಾರೆ‌.

Edited By : Nagaraj Tulugeri
PublicNext

PublicNext

26/01/2021 05:19 pm

Cinque Terre

55.88 K

Cinque Terre

0