ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲ‌ ಇದ್ದರೂ ಏನೂ ಇಲ್ಲದಂತಾಯ್ತು

ಕೈ ತುಂಬ ಸಂಬಳ, ಖರ್ಚಿಗೆ ಕಾಸು, ಜನಸೇವೆಯ ವೈದ್ಯ ವೃತ್ತಿ, ಅಂದ-ಚಂದದ ಕುಟುಂಬ, ಮುದ್ದಾದ ಮಕ್ಕಳು ಇದೆಲ್ಲ ಇತ್ತು. ಆದ್ರೆ ಯಮರಾಜನಿಗೆ ಇದ್ಯಾವುದೂ ಇಷ್ಟ ಆಗಲಿಲ್ಲ ಅಂತ ಕಾಣ್ಸುತ್ತೆ. ಒಮ್ಮಿಂದೊಮ್ಮೆಲೇ ಇವರೆಲ್ಲರನ್ನು ತನ್ನತ್ತ ಬರಸೆಳೆದುಕೊಂಡಿದ್ದಾ‌ನೆ.

ಜನವರಿ 15ರಂದು ಧಾರವಾಡ ಸಮೀಪದ ಇಟಿಗಟ್ಟಿ ಬಳಿ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡ ಜೀವಗಳ ದೃಶ್ಯಗಳಿವು. ಈ ಘಟನೆ ಕಂಡ ರಾಜ್ಯದ ಜನ ಇಂತಹ ಘನಘೋರ ಅಕಾಲಿಕ ಸಾವು ಯಾರಿಗೂ ಬಾರದಿರಲಿ ಎಂದು ಮಮ್ಮಲ ಮರುಗಿದ್ದರು.

ಮಕ್ಕಳಿಗೆ ಮಮತೆಯ ಅಮ್ಮನಾಗಿ, ಪೋಷಕರಿಗೆ ಹೆಮ್ಮೆಯ ಮಗಳಾಗಿ, ಪತಿಗೆ ಪ್ರೀತಿಯ ಮಡದಿಯಾಗಿ ಬದುಕಿದ್ದ ಇವರೆಲ್ಲ ಅನಿರೀಕ್ಷಿತ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಈ ದೃಶ್ಯಗಳನ್ನ ನೋಡಿದ ಜನ ಇಂತಹ ಘೋರ ಅನ್ಯಾಯದ ಸಾವು ಯಾರಿಗೂ ಬಾರದಿರಲಿ ಎಂದು ವಿಧಿಯನ್ನು ಶಪಿಸುತ್ತಿದ್ದಾರೆ.

Edited By : Manjunath H D
PublicNext

PublicNext

19/01/2021 06:15 pm

Cinque Terre

119.47 K

Cinque Terre

7