ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಮಾಡಿದ ಮಹತ್ವದ ಕಾರ್ಯಕ್ಕೆ ಮೆಚ್ಚುಗೆ ಮಾತುಗಳ ಸುರಿಮಳೆ

ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬ ನಾಣ್ಣುಡಿಯಂತೆ ಇಲ್ಲಿಬ್ರೂ ಪುಟ್ಟ ಕಂದಮ್ಮಗಳು ಸುರಿಯುವ ಮಳೆಯಲ್ಲಿ ಮಾಡಿರೋ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಆ ಕಂದಮ್ಮಗಳ ಉತ್ತಮ ಕೆಲಸಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೌದು ! ಅದೇನಪ್ಪಾ ಆ ಮಕ್ಕಳು ಮಾಡಿರೋ ಮಹಾನ್ ಕಾರ್ಯ ಅಂದ್ರಾ, ಈ ವಿಡಿಯೋ ನೋಡಿ ಸುರಿಯುವ ಮಳೆಯಲ್ಲಿ ತಮ್ಮ ಕೆಲಸಕ್ಕೆ ಹೋಗಿ ಮರಳುವಾಗ ಬಾಲಕಿ ರಸ್ತೆಯ ಪಕ್ಕದಲ್ಲಿ ನೀರು ಸಂಗ್ರಹವಾದ ಗುಂಡಿಯನ್ನು ಪಕ್ಕದಲ್ಲಿ ಬಿದ್ದಿರುವ ಬ್ಯಾರಿಕೇಡ್ ಎತ್ತಿಟ್ಟು ಮುಚ್ಚಿ ಬಳಿಕ ಯಾವುದೊಂದು ಅಗಲವಾದ ವಸ್ತುವನ್ನು ನೀರಿನ ಗುಂಡಿ ಮೇಲೆ ಮುಚ್ಚುತ್ತಾಳೆ, ಈ ಬಾಲಕಿಯ ಕಾರ್ಯಕ್ಕೆ ಅವಳಿಗಿಂತ ಕಿರಿ ವಯಸ್ಸಿನ ಬಾಲಕ ಛತ್ರಿ ಹಾಗೂ ಕೈ ಚೀಲ ಹಿಡಿದು ಸಾಥ್ ನೀಡಿದ್ದಾನೆ.

ಇವರಿರ್ವರೂ ಮಾಡಿದ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಎದ್ದು ತೋರುತ್ತಿದ್ದು, ಯಾವ ಸ್ಥಳ ? ಮಕ್ಕಳು ಯಾರು ? ಯಾವಾಗ ನಡೆದ ಘಟನೆ ? ಎಂಬುದು ತಿಳಿದು ಬಂದಿಲ್ಲ.

ಒಟ್ಟಾರೆ ಮಕ್ಕಳು ಮಾಡಿದ ಪರೋಪಕಾರದ ಕೆಲಸಕ್ಕೆ ಮೆಚ್ಚುಗೆ ಮಾತು ಕೇಳಿ ಬಂದಿದ್ರೇ, ಕೆಲವರು ಇದೇ ವಿಡಿಯೋ ನೋಡಿ ರಾಜಕಾರಣಿಗಳಿಗೆ ಈ ಮಕ್ಕ

ಕೆಲಸ ನೋಡಿ ಕಲಿಯಿರಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

Edited By : Nagesh Gaonkar
PublicNext

PublicNext

09/01/2021 09:53 pm

Cinque Terre

75.08 K

Cinque Terre

8