ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಮಗಡ್ಡೆಯ ಮೇಲೆ ಗರ್ಭಿಣಿಯ ಹೊತ್ತು ಸಾಗಿದರು ನಮ್ಮ ಸೈನಿಕರು

ಕುಪ್ವಾರ: ದೇಶಭಕ್ತಿಗೆ ನಿದರ್ಶನವಾಗಿರುವ ನಮ್ಮ ಹೆಮ್ಮೆಯ ಸೈನಿಕರ ತ್ಯಾಗಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು. ಅದೆಂತದ್ದೇ ನೈಸರ್ಗಿಕ ವಿಕೋಪದ ಪರಿಸ್ಥಿತಿ ಬಂದಾಗಲೂ ಸೈನಿಕರು ಸಾಮಾನ್ಯರ ನೆರವಿಗೆ ಧಾವಿಸಿ ಬರುತ್ತಾರೆ. ತಮ್ಮ ಪ್ರಾಣದ ಹಂಗು ತೊರೆದು ಸಂಕಷ್ಟದಲ್ಲಿ ಇರುವವರನ್ನು ರಕ್ಷಣೆ ಮಾಡುತ್ತಾರೆ. ಈಗ ಸೈನಿಕರು ಅಂತದ್ದೇ ಒಂದು ಮಹತ್ಕಾರ್ಯ ಮಾಡಿದ್ದಾರೆ. ಸೈನಿಕರ ಈ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಕಾಶ್ಮೀರದಲ್ಲಿ ಹಿಮ ಬೀಳುತ್ತಲೇ ಇದೆ. ಆದರೆ ಸೇನೆ ಮಾಡಿದ ಕೆಲಸಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು. ತುರ್ತು ಸಂದರ್ಭದಲ್ಲಿ ಗರ್ಭಿಣಿಯನ್ನು ಸುರಿಯುವ ಹಿಮದಲ್ಲಿ ಬರೋಬ್ಬರಿ ಎರಡು ಕಿಮೀ ಹೊತ್ತು ಸಾಗಿದ್ದಾರೆ. ಮೊಣಕಾಲಿನವರೆಗೆ ಹಿಮ ತುಂಬಿದ್ದರೂ ಜಗ್ಗದೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುರುವಾರ ರಾತ್ರಿ 11.30 ರ ಸುಮಾರಿಗೆ ಸೇನೆಯ ಕ್ಯಾಂಪ್ ಗೆ ಕರೆ ಒಂದು ಬಂದಿದೆ. ಮನ್ ಜೂರ್ ಅಹಮದ್ ಶೇಖ್ ಎನ್ನುವರು ಕರೆ ಮಾಡಿದ್ದಾರೆ. ತಮ್ಮ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಸಹಾಯ ಬೇಕು ಎಂದು ಕೋರಿದ್ದಾರೆ. ಆ ಸಂದರ್ಭದಲ್ಲಿ ಹಿಮ ಬೀಳುತ್ತಲೇ ಇತ್ತು. ಈ ಕಾರಣದಿಂದ ಆರೋಗ್ಯ ಸೇವೆ ನೀಡುವ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ.

ಹಾಗಾಗಿ ಬೇರೆ ಆಯ್ಕೆ ಇರಲಿಲ್ಲ. ಆರೋಗ್ಯ ಸಿಬ್ಬಂದಿ ಒಬ್ಬರನ್ನು ಕರೆದುಕೊಂಡು ಗರ್ಭಿಣಿ ಇದ್ದಲ್ಲಿಗೆ ತೆರಳಿ ಪ್ರಾಥಮಿಒಕ ಚಿಕಿತ್ಸೆ ನೀಡಲಾಗಿದೆ. ಅದಾದ ಮೇಲೆ ಅಲ್ಲಿಂದ ಶಿಫ್ಟ್ ಮಾಖಡುವುದು ಅನಿವಾರ್ಯ ಎಂಬಂತೆ ಗೊತ್ತಾಗಿದೆ. ಅಲ್ಲಿಂದ ಮಹಿಳೆಯನ್ನು ಹೊತ್ತುಕೊಂಡು ಯೋಧರು ಆಸ್ಪತ್ರೆಗೆ ಆಗಮಿಸಿದ್ದಾರೆ. ಸೇನೆ ಸಹ ಈ ಕಾರ್ಯವನ್ನು ಕೊಂಡಾಡಿದ್ದು ದೇಶದ ನಾಗರಿಕರು ಸೇನೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Edited By : Nagaraj Tulugeri
PublicNext

PublicNext

08/01/2021 09:24 pm

Cinque Terre

160.4 K

Cinque Terre

28