ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ವೆ ಮಂಟಪದಿಂದ ವರ ನಾಪತ್ತೆ– ವಧುವಿನ ಕೈ ಹಿಡಿದ ಬಿಎಂಟಿಸಿ ಕಂಡಕ್ಟರ್

ಚಿಕ್ಕಮಗಳೂರು: ಮದುವೆ ಮಂಟಪದಿಂದ ವರ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ಧವಾಗಿ ನಿಂತಿದ್ದ ಯುವತಿಗೆ ಬಿಎಂಟಿಸಿ ಬಸ್ ಕಂಡಕ್ಟರ್ ಬಾಳು ಕೊಟ್ಟ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ.

ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ನವೀನ್‌ಗೆ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು. ಹಿಂದಿನ ದಿನ ರಾತ್ರಿ ನಡೆದ ರಿಸೆಪ್ಷನ್‌ಗೆ ಇದ್ದ ನವೀನ್ ಬೆಳಗ್ಗೆ ಮುಹೂರ್ತದ ಹೊತ್ತಿಗಾಗಲೇ ನಾಪತ್ತೆಯಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಬಂದಿದ್ದ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬವರು ಮದುವೆಗೆ ತಯಾರಿ ನಡೆದು ಮಂಟಪವೇರಿದ್ದ ವಧು ಸಿಂಧು ಅವರನ್ನು ಅಲ್ಲೇ ನೋಡಿ ಕೊನೆ ಕ್ಷಣದಲ್ಲಿ ತಾಳಿಕಟ್ಟಿ ಮದುವೆ ಆಗಿದ್ದಾರೆ.

ನವೀನ್ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ನನ್ನನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದರೆ ಮದುವೆ ಮಂಟಪಕ್ಕೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುದಾಗಿ ನವೀನ್‌ ಗೆಳತಿ ಬೆದರಿಕೆ ಹಾಕಿದ್ದಳು. ಇದರಿಂದಾಗಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕಾಗಿ ನವೀನ್ ಪ್ರೀತಿಸುತ್ತಿದ್ದ ಯುವತಿಯನ್ನು ತುಮಕೂರಿಗೆ ಬರಲು ತಿಳಿಸಿ ಮದುವೆ ಮಂಟಪದಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

Edited By : Vijay Kumar
PublicNext

PublicNext

03/01/2021 11:18 pm

Cinque Terre

87.57 K

Cinque Terre

6