ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ಧೆಗಾಗಿ ಸೂರು ನಿರ್ಮಿಸಿದ SI ಕಾರ್ಯ ಶ್ಲಾಘನೀಯ

ಹೈದರಾಬಾದ್ : ಪೊಲೀಸರು ಅಂದ್ರೆ ಜನರಿಗೆ ಗೌರವಕ್ಕಿಂತಲೂ ಕೋಪವೇ ಹೆಚ್ಚು ಆದ್ರೆ ಎಲ್ಲ ಪೊಲೀಸರು ಒಂದೇ ರೀತಿಯಲ್ಲ, ಅವರಲ್ಲೂ ಮಾನವೀಯ ಗುಣಗಳು ಹಾಗೂ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದನ್ನು ತೆಲಂಗಾಣ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಾಭೀತು ಮಾಡಿದ್ದಾರೆ.

ಎಸ್ ಐ ಗುಂದ್ರಥಿ ಸತೀಶ್ ಅವರು ನಿರ್ಗತಿಕ ವೃದ್ಧೆಗೆ ಹೊಸ ಮನೆಯನ್ನು ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಾಂಗಲ್ ಜಿಲ್ಲೆಯ ಲಕ್ಷ್ಮಿನಾರಾಯಣಪುರಂ ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ, ಎಸ್ ಐ ಸತೀಶ್ ತಮ್ಮದೇ ಹಣದಲ್ಲಿ ಪುಟ್ಟದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

70 ರ ರಾಜಮ್ಮನಿಗೆ ಅಂಗವಿಕಲ ಮಗ ಇದ್ದಾನೆ ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ.

ಹೀಗಿರುವಾಗ ರಾಜಮ್ಮ ಒಬ್ಬಳೇ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು. ಇದು ಎಸ್ ಐ ಸತೀಶ್ ಅವರ ಗಮನಕ್ಕೆ ಬಂದಿದೆ.

ರಾಜಮ್ಮಳನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ದಾನಿಗಳ ಸಹಾಯದಿಂದ ಹಾಗೂ ಅರ್ಧ ತಮ್ಮ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಸುಮಾರು 1,60,000 ರೂಪಾಯಿ ಹಣದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ರಾಜಮ್ಮ ಅವರ ಪರಿಸ್ಥಿತಿ ಕಂಡು ನನಗೆ ನೋವಾಯಿತು. ಅವರಿಗೆ ಎನನ್ನಾದರೂ ಸಹಾಯ ಮಾಡಬೇಕು ಯೋಚಿಸಿದೆ.

ನನ್ನಿಂದ ಸಾಧ್ಯವಾಗಿರುವ ಪುಟ್ಟ ಸಹಾಯವನ್ನು ನಾನು ಮಾಡಿದ್ದೇನೆ. ದಾನಿಗಳ ಸಹಾಯ ಮತ್ತು ನನ್ನ ಹಣವನ್ನು ಸೇರಿಸಿ ಒಂದು ಮನೆ ನಿರ್ಮಿಸಿಕೊಟ್ಟಿದ್ದೇನೆ ಎಂದು ಎಸ್ ಐ ಸತೀಶ್ ಅವರು ಹೇಳಿದ್ದಾರೆ.

ಎಸ್ ಐ ಸತೀಶ್ ಅವರು ಅನೇಕ ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Edited By : Nirmala Aralikatti
PublicNext

PublicNext

03/01/2021 11:33 am

Cinque Terre

79.1 K

Cinque Terre

27

ಸಂಬಂಧಿತ ಸುದ್ದಿ