ಉತ್ತರ ಪ್ರದೇಶ: ಫತೇಪುರ್ ಜಿಲ್ಲೆಯಲ್ಲಿ ಮಹಾಬಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ, ಕಲಾವಿದರೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿದ್ದಾರೆ. ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ದುರ್ಗಾ ಪಂಡಾಲ್‌ನಲ್ಲಿ ಜಾಗರಣೆಯ ವೇಳೆ ಲಂಕಾ ದಹನದ ದೃಶ್ಯಕ್ಕೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಕಲಾವಿದ ರಾಮಸ್ವರೂಪ್ ಏಕಾಏಕಿ ಸಿಂಹಾಸನದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾಹಲ ಉಂಟಾಯಿತು. ಹಿರಿಯ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಯ ನಂತರ ಪಂಡಾಲ್‌ನಲ್ಲಿ ನೀರವ ಮೌನ ಆವರಿಸಿತ್ತು. ವೇದಿಕೆಯನ್ನು ನೋಡುತ್ತಿದ್ದ ಅವರ ಪತ್ನಿ ಅಳಲಾರಂಭಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನವರಾತ್ರಿಯ ಪ್ರಯುಕ್ತ ಸೇಲಂಪುರದಲ್ಲಿ ದೇವಿಯ ಜಾಗರಣ ಕಾರ್ಯಕ್ರಮ ನಡೆಯುತ್ತಿತ್ತು. ಶನಿವಾರ ರಾತ್ರಿ ಪಂದಳದಲ್ಲಿ ರಾಮಲೀಲಾ ಆಯೋಜಿಸಲಾಗಿತ್ತು. ಗ್ರಾಮದ 50 ವರ್ಷದ ರಾಮಸ್ವರೂಪ ಮಹಾಬಲಿ ಹನುಮಂತನ ಪಾತ್ರ ಮಾಡುತ್ತಿದ್ದ. ವೇದಿಕೆಯಲ್ಲಿ, ಲಂಕೆಗೆ ಬೆಂಕಿ ಹಚ್ಚಲು ಅವನ ಬಾಲಕ್ಕೆ ಬೆಂಕಿ ಹಚ್ಚಲಾಗಿತ್ತು.
ಇದಾದ ನಿಮಿಷದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಅವರು ಸಿಂಹಾಸನದಿಂದ ತಲೆಕೆಳಗಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ಅವರನ್ನು ಎತ್ತಲು ಜನರು ಓಡಿ ಬಂದಿದ್ದಾರೆ. ಕೂಡಲೃಏ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.
PublicNext
03/10/2022 12:56 pm