ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮದುವೆ ಮನೆಯಲ್ಲಿ ಅಪ್ಪನ ಮೇಣದ ಪ್ರತಿಮೆ ಕಂಡು ಕಣ್ಣೀರಾದ ಮಗಳು

ಮಗಳಿಗೆ ಅಮ್ಮನಿಗಿಂತ ಅಪ್ಪ ಎಂದರೆ ತುಸು ಹೆಚ್ಚು ಪ್ರೀತಿ. ಅಪ್ಪನ ಮಮಕಾರ ಮಗಳಿಗೆ ಸದಾಕಾಲ ನೆನಪಲ್ಲಿರುತ್ತೆ. ಅಪ್ಪನ ಮರಣದಿಂ ಪ್ರತಿ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.

ಇದೇ ರೀತಿ ಅಪ್ಪನನ್ನು ಕಳೆದುಕೊಂಡ ಮಗಳು ತನ್ನ ಮದುವೆಯಲ್ಲಿ ಇದ್ದಕ್ಕಿದ್ದಂತೆ ಅಪ್ಪನ ಮೇಣದ ಪ್ರತಿಮೆ ನೋಡುತ್ತಾಳೆ. ಆಗ ಗದ್ಗದಿತಳಾಗಿ ಕಣ್ಣೀರಿದ್ದಾಳೆ. ಕಲ್ಲು ಹೃದಯವನ್ನೂ ಕರಗಿಸುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನಿವೃತ್ತ ಬಿಎಸ್ಎನ್ಎಲ್ ನೌಕರ ಅವುಲ ಸುಬ್ರಹ್ಮಣ್ಯಂ ಅವರು ಕೊರೊನಾ ಸೋಂಕು ತಗುಲಿ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಅದಾಗಿ ಎರಡು ವರ್ಷಗಳ ನಂತರ ಅಂದ್ರೆ ಇತ್ತೀಚೆಗೆ ಅವರ ಮಗಳ ಮದುವೆ ನಿಶ್ಚಯವಾಗಿದೆ. ತಂಗಿಗೆ ಸರ್ಪ್‌ರೈಸ್ ನೀಡಬೇಕೆಂಬ ಉದ್ದೇಶಕ್ಕೆ ಸಹೋದರ ಅವುಲ ಫಣಿ ಅವರು ತಂದೆಯ ಮೇಣದ ಪ್ರತಿಮೆ ಮಾಡಿಸಿ ಮದುವೆ ಹಾಲ್‌ನಲ್ಲಿ ಇರಿಸಿದ್ದಾರೆ. ಇದನ್ನು ಅಚಾನಕ್ ಆಗಿ ಕಂಡ ಮಗಳು ಹಾಗೂ ತಾಯಿ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಕಲಾವಿದರೊಬ್ಬರು ಈ ಪ್ರತಿಮೆ ತಯಾರಿಸಿದ್ದು ಇದಕ್ಕಾಗಿ ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

28/06/2022 04:05 pm

Cinque Terre

60.88 K

Cinque Terre

6

ಸಂಬಂಧಿತ ಸುದ್ದಿ