ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ವಧುವಿನ ಎಂಟ್ರಿ ಕಂಡು ವರ ಫುಲ್ ಖುಷ್ ಆಗಿದ್ದಾನೆ. ಅಷ್ಟೇ ಆಗಿದ್ದೇರೆ ಇದು ಸುದ್ದಿನೇ ಅಲ್ಲ ಬಿಡಿ.ಆದರೆ,ಇಲ್ಲಿ ವಧುವಿನ ಸುಂದರ ಸರ್ಪ್ರೈಜ್ ಗೆ ವರ ಕಣ್ಣೀರು ಹಾಕಿದ್ದಾನೆ. ಬನ್ನಿ,ನೋಡೋಣ.
ಮದುವೆ ಮನೆ ಅಂದ್ಮೇಲೆ ಅಲ್ಲಿ ಸರ್ಪ್ರೈಜ್‌ಗಳು ಇರುತ್ತವೆ. ಭಾವನಾತ್ಮಕ ಸನ್ನಿವೇಶಗಳಿಗೇನೂ ಕೊರತೆ ಇರೋದಿಲ್ಲ. ಅದರಂತೆ ವಧು ತನ್ನ ವರನಿಗೆ ಸುಂದರವಾದ ಸರ್ಪ್ರೈಜ್‌ಅನ್ನೇ ಕೊಟ್ಟಿದ್ದಾಳೆ.
ಹೌದು. ನೀಲಿ ಹಾಗೂ ಗುಲಾಬಿ ಬಣ್ಣದ ಲೆಹಂಗಾ ತೊಟ್ಟ ವಧು ಇಲ್ಲಿ ಅಷ್ಟೇ ಅದ್ಭುತವಾಗಿಯೇ ಕಾಣಿಸಿದ್ದಾಳೆ. ಈಕೆಯ ಎಂಟ್ರಿ ಕೂಡ ಇಲ್ಲಿ ವಿಶೇಷವಾಗಿಯೇ ಪ್ಲಾನ್ ಆಗಿದೆ. ಅದನ್ನ ಕಂಡ ವರ ಫುಲ್ ಖುಷ್ ಆಗೋದರ ಜೊತೆಗೆ ಸಖತ್ ಫೀಲ್ ಕೂಡ ಆಗಿದ್ದಾನೆ. ಅದೇ ವೀಡಿಯೋನೆ ಈಗ ವೈರಲ್ ಆಗಿದೆ.
PublicNext
02/05/2022 11:03 am