ಮಧ್ಯಪ್ರದೇಶ: ಉತ್ತರ ಭಾರತದ ಹಳ್ಳಿಗಳಲ್ಲಿ ಆರೋಗ್ಯ ಕೇಂದ್ರಗಳು ಸರಿಯಾಗಿ ಕೆಲಸ ಮಾಡ್ತಿಲ್ಲ ಅನಿಸುತ್ತದೆ. ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟರೆ ನಿಜಕ್ಕೂ ದುರಂತವೇ ನೋಡಿ. ಶವ ಸಾಗಿಸಲು ಸಂಬಂಧಿಗಳಿಗೆ ವಾಹನಗಳೇ ಸಿಗೋದಿಲ್ಲ. ಮೊನ್ನೆ ಛತೀಸ್‌ಗಢ್‌ದಲ್ಲಿ ತಂದೆ ಮಗಳ ಶವವನ್ನ ಹೆಗಲ ಮೇಲೆ ಹೊತ್ತು ಸಾಗಿದ್ದರು. ಈಗ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಮೃತ ಮಹಿಳೆಯ ಶವವನ್ನ ಮಂಚದ ಮೇಲೆ ಹೊತ್ತು ಕೊಂಡು ಸಾಗಿದ್ದಾರೆ. ಬನ್ನಿ, ಈ ಬಗ್ಗೆ ಇನ್ನಷ್ಟು ಮಾಹಿತಿ ಕೊಡುತ್ತೇವೆ.
ರೇವಾ ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಮಂಚದ ಮೇಲೆ ಶವವೊಂದನ್ನ ಹೊತ್ತು ಕೊಂಡು ರಸ್ತೆ ಮೇಲೆ ಸಾಗಿದ್ದಾರೆ. ಈ ಒಂದು ವೀಡಿಯೋ ಈಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.
ಜಿಲ್ಲೆಯ ರಾಯಪುರ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಮಹಿಳೆಯನ್ನ ಚಿಕಿತ್ಸೆಗಾಗಿಯೇ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೇ ಆ ಮಹಿಳೆ ಮೃತಪಟ್ಟಿದ್ದಾರೆ.
ಆದರೆ, ಆರೋಗ್ಯ ಕೇಂದ್ರದಲ್ಲಿ ಶವ ಸಾಗಿಸೋ ವಾಹನವನ್ನ ಕೊಡಲೇ ಇಲ್ಲ. ಈ ಕಾರಣಕ್ಕೇನೆ ಮೃತ ಮಹಿಳೆಯ ಶವವನ್ನ ಮಂಚದ ಮೇಲೆ ಸಾಗಿಸುತ್ತಿದ್ದೇವೆ ಎಂದು ಮೃತ ಮಹಿಳೆಯ ಸಂಬಂಧಿಗಳಾಗಿರೋ ಈ ನಾಲ್ವರು ಮಹಿಳೆಯರು ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿರೋ ಈ ವೀಡಿಯೋ ಅನೇಕರ ಕೆಂಗಣ್ಣಿಗೆ ಗುರಿ ಕೂಡ ಆಗಿದೆ. ನೆಟ್ಟಿಗರಂತೂ ತಮ್ಮದೇ ರೀತಿಯಲ್ಲಿ ಸಿಟ್ಟು ಹೊರಹಾಕುತ್ತಿದ್ದಾರೆ.
PublicNext
30/03/2022 05:09 pm