ಹಸಿವು ಬಡತನ ಅನ್ನೋದು ಎಷ್ಟು ಭಯಂಕರ..ಅದರಲ್ಲೂ ಬಡತನದ ಸ್ಥಿತಿಯಲ್ಲಿ ಮಗುವೊಂದು ಹುಟ್ಟಿ ತನ್ನ ಹಸಿವು ನೀಗಿಸಿಕೊಳ್ಳಲು ಬಸ್ ನಿಲ್ದಾಣದಲ್ಲಿ ಚಿಪ್ಸ್ ಪ್ಯಾಕೆಟ್ ಒಂದನ್ನು ಕದಿಯುವ ದೃಶ್ಯ ನಿಜಕ್ಕೂ ಎಲ್ಲರ ಮನ ಕುಲಕದೆ ಇರಲಾರದು.
ಈ ವಿಡಿಯೋ ಕರ್ನಾಟಕ ರಾಜ್ಯದ್ದು ಎಂಬುದು ಬೇಕರಿ ಬೋರ್ಡ್ ನೋಡಿದ್ರೆ, ತಿಳಿಯುತ್ತೆ. ಆದ್ರೆ, ಯಾವ ಸ್ಥಳ ಎಂಬ ಬ್ಗಗೆ ಮಾಹಿತಿ ಇಲ್ಲ. 14 ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟಾಣಿ ಕಂದಮ್ಮಗಳಿಗೆ ಹಸಿವು ಎಂಬುದು ಎಷ್ಟು ಕ್ರೂರ ಎಂಬುದು ಈ ವಿಡಿಯೋ ಮೂಲಕ ಕಣ್ಣಿಗೆ ರಾಚುವಂತೆ ತಿಳಿಯುತ್ತಿದೆ.
ಬಹುಶಃ ಮೂರದಿಂದ ನಾಲ್ಕು ವರ್ಷದ ಮಗು ಹಸಿವಿಗಾಗಿ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಓಡುವ ದೃಶ್ಯ ನಿಜಕ್ಕೂ ಕಲ್ಲು ಹೃದಯವನ್ನೂ ಕರಗಿಸುತ್ತಿದೆ.
PublicNext
08/03/2022 08:55 pm