ಲಕ್ ಅನ್ನೋದು ಇದೆಯಲ್ಲ...ಅದು ಯಾವ ಸಮಯದಲ್ಲಿ, ಯಾವ ಮಾರ್ಗದಿಂದ ಬಂದು ನಮಗೆ ಒಲಿಯುತ್ತೋ ಗೊತ್ತಾಗೋದೇ ಇಲ್ಲ. ಆ ಅದೃಷ್ಟಕ್ಕಾಗಿ ನಾವು ಕಾಯುತ್ತ ಕೂರಬಾರದು. ನಮ್ಮ ಪಾಡಿಗೆ ನಾವು ದುಡಿಯಬೇಕು. ಕಾಯಕದಲ್ಲಿ ಸದಾ ಮುಳುಗಿರಬೇಕು.
ಹೀಗೆ ತನ್ನ ಪಾಡಿಗೆ ತಾನು ಒಣ ಶೇಂಗಾ ಮಾರುತ್ತ ಜೀವನ ನಡೆಸುತ್ತಿದ್ದ ಭುಬನ್ ಬಡ್ಯಾಕರ್ ಎಂಬ ಬೆಂಗಾಳಿ ಶೇಂಗಾ ವ್ಯಾಪಾರಿಯೊಬ್ಬ ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಜನರು ತಮ್ಮ ಬಳಿಯ ಹಳೆಯ, ಉಪಯೋಗಕ್ಕೆ ಬಾರದ ಮೊಬೈಲ್ , ಚೈನ್ ಹಾಗೂ ಇತರ ವಸ್ತುಗಳನ್ನು ಕೊಟ್ಟರೆ ಭುಬನ್ ಅವರಿಗೆ ಅದರ ಮೌಲ್ಯದ ಶೇಂಗಾ ಕೊಡ್ತಾನೆ.
ಈತ ತನ್ನ ಶೇಂಗಾ ವ್ಯಾಪಾರಕ್ಕಾಗಿ ಜನರನ್ನು ಸೆಳೆಯಲು ಆ ಕಡೆ ಗದ್ಯವೂ ಅಲ್ಲದ ಈ ಕಡೆ ಪದ್ಯವೂ ಅಲ್ಲದ ಹಾಡೊಂದನ್ನು ಹಾಡುತ್ತಾನೆ. ಈತ ಹೀಗೆ ಹಾಡೋದನ್ನು ವಿಡಿಯೋ ಮಾಡಿಕೊಂಡ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲಿಂದ ಭುಬನ್ ಬುಡ್ಯಾಕರ್ ಹವಾ ಸೃಷ್ಟಿಯಾಗಿದೆ. ಸದ್ಯ ಇದೇ ಹಾಡನ್ನು ರ್ಯಾಪ್ ಸಾಂಗ್ ಆಗಿದೆ. ಇದಕ್ಕೆ ಡಿಜೆ ಮಿಕ್ಸ್ ಮಾಡಿದ ಕೆಲವರು ನೃತ್ಯ ಸಂಯೋಜನೆ ಮಾಡಿ ಆಲ್ಬಮ್ ಸಾಂಗ್ ಎಡಿಟ್ ಮಾಡಿ ಅಪ್ಲೋಡ್ ಮಾಡ್ತಿದ್ದಾರೆ. ಹೀಗಾಗಿ ಯೂಟ್ಯೂಬ್‌ನಲ್ಲಿ ಒಂದು ರೇಂಜ್‌ಗೆ ಪುಷ್ಪಾ ಚಿತ್ರದ ಹಾಡಿಗೂ ಇದು ಕೌಂಟರ್ ಕೊಟ್ಟಿದೆ ಎನ್ನಬಹುದು.
PublicNext
04/02/2022 06:04 pm