ಬೀಜಿಂಗ್:ಪ್ರಾಣಿಗಳ ಬರ್ತ್ ಡೇ ಆಚರಿಸೋದು ಈಗ ಎಲ್ಲೆಡೆ ಕಾಮನ್ ಆಗಿದೆ. ಆದರೆ ಬೀಜಿಂಗ್‌ನ ಮಹಿಳೆಯೊಬ್ಬರು ಈಗ ಇಡೀ ಜಗತ್ತಿಗೆ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ. ತಮ್ಮ ಪ್ರೀತಿಯ ನಾಯಿಗೋಸ್ಕರವೇ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬನ್ನಿ, ಹೇಳ್ತೀವಿ.
ಶ್ವಾನ ಪ್ರಿಯೆ ಮಹಿಳೆ ತನ್ನ ಡೌಡೌ ಹೆಸರಿನ ನಾಯಿಯ 10ನೇ ಜನ್ಮ ದಿನಕ್ಕೆ ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಈ ಬರ್ತ್‌ಡೇ ಪಾರ್ಟಿಯಲ್ಲಿ ಬೆಳಕಿನ ವಿಶೇಷ ಪ್ರದೇಶವನ್ನೂ ಏರ್ಪಡಿಸಿದ್ದಳು. ಈ ಇಡೀ ಕಾರ್ಯಕ್ರಮವನ್ನ ಕವರ್ ಮಾಡಲು 520 ಡ್ರೋನ್ ಕ್ಯಾಮೆರಾಗಳನ್ನೂ ಬಾಡಿಗೆ ಪಡೆದಿದ್ದಳು.
ಆದರೆ, ಅನಧಿಕೃತವಾಗಿಯೇ ಡ್ರೋನ್ ಹಾರಿಸಿದಕ್ಕೆ ಪೊಲೀಸರ ಕೆಂಗಣ್ಣಿಗೂ ಗುರಿ ಆಗಿದ್ದಾಳೆ. ಆದರೆ ಈ ಮಹಿಳೆಯ ಶ್ವಾನ ಪ್ರೀತಿಗೆ ಶ್ವಾನ ಪ್ರಿಯರು ಬಹುವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
07/01/2022 01:45 pm