ಕೋಝಿಕ್ಕೋಡ್: ಜಸ್ನಾ ಸಲೀಂ ಎಂಬ ಕೋಝಿಕ್ಕೋಡ್ ಮೂಲದ ಮುಸ್ಲಿಂ ಯುವತಿಯೊಬ್ಬರು ಶ್ರೀ ಕೃಷ್ಣನ ಪೇಂಟಿಂಗ್ ರಚನೆಯ ಮೂಲಕ ಹಲವು ವರ್ಷಗಳ ಹಿಂದೆಯೇ ಸುದ್ದಿ ಮಾಡಿದ್ದರು. 28ರ ಹರೆಯದ ಜಸ್ನಾಗೆ ಈಡೇರದೇ ಇದ್ದ ಒಂದು ಆಸೆ ಉಳಿದಿತ್ತು.
ಆ ಆಸೆ ಏನೆಂದರೆ ಶ್ರೀಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡಿ, ತಾನು ರಚಿಸಿದ ಕೃಷ್ಣನ ಪೇಂಟಿಂಗ್ ಅನ್ನು ಆತನಿಗೆ ಅರ್ಪಿಸುವುದು. ಇದೀಗ ಜಸ್ನಾ ಆಸೆ ನೆರವೇರಿದೆ. ಪಂಡಲಂನಲ್ಲಿನ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ತನ್ನ ಪೇಂಟಿಂಗ್ ನ್ನು ಸಮರ್ಪಿಸಿದ್ದಾರೆ.
ಕಳೆದ 6 ವರ್ಷಗಳಲ್ಲಿ 500ಕ್ಕೂ ಅಧಿಕ ಶ್ರೀಕೃಷ್ಣನ ಪೇಂಟಿಂಗ್ ರಚಿಸಿದ ಕೀರ್ತಿ ಜಸ್ನಾ ಅವರದು. ಹಾಗಿದ್ದೂ ಅವರಿಗೆ ಇದುವರೆಗೂ ತನ್ನ ನೆಚ್ಚಿನ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗುವ ಆಸೆ ಈಡೇರಿರಲಿಲ್ಲ.
ಹಿಂದೊಮ್ಮೆ ತನ್ನ ಹಿಂದೂ ಗೆಳತಿಯ ಕುಟುಂಬಕ್ಕೆ ಕೃಷ್ಣನ ಪೇಂಟಿಂಗ್ ಉಡುಗೊರೆಯಾಗಿ ನೀಡಿದ್ದರು. ಅದಾದ ನಂತರ ಅವರ ಮನೆಯಲ್ಲಿ ಒಳ್ಳೆಯ ಘಟನೆಗಳು ನಡೆದವು ಎಂದು ಆ ಗೆಳತಿ ಹೇಳಿದ್ದನ್ನು ಸ್ಮರಿಸಿಕೊಳ್ಳುತ್ತಾರೆ ಜಸ್ನಾ.
PublicNext
30/09/2021 07:00 pm