ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನನ್ನಾ ಬಿಜೆಪಿಗೆ ಬರಮಾಡಿಕೊಂಡಿದೆ ಅಂಗಡಿ : ಹಿರಿಯ ಅಣ್ಣನನ್ನು ನೆನೆದು ಕಣ್ಣೀರಿಟ್ಟ ಸಾಹುಕಾರ

ಡೆಡ್ಲಿ ಕೊರೊನಾ ಸೋಂಕಿಗೆ ಅಕಾಲಿಕ ಮರಣ ಹೊಂದಿದ ಸುರೇಶ್ ಅಂಗಡಿ ಅವರನ್ನು ನೆನೆದು ಜಲ ಸಂಪನ್ಮೂಲ ಸಚಿವ ರಮೇಶ್ಜಾರಕಿಹೊಳಿ ಮಮ್ಮಲ ಮರುಗಿದ್ದಾರೆ.

ನಾನು ಸುರೇಶ ಒಂದೇ ಜಿಲ್ಲೆಯವರು. ಆರಂಭಿಕ ಹಂತದಲ್ಲಿ ಬೇರೆ ಬೇರೆ ಪಕ್ಷದಲ್ಲಿದ್ದರೂ ಆತ್ಮೀಯ ಸ್ನೇಹಿತರಾಗಿದ್ದೇವು.

ಮಹಾಮಾರಿಗೆ ಕೊರೊನಾದಿಂದ ಅವರು ಕೊನೆಯುಸಿರೆಳೆದಿರುವುದು ಆಘಾತ ನೀಡಿದೆ.

ನನ್ನ ಹಿರಿಯ ಅಣ್ಣನ ರೀತಿಯಲ್ಲಿದ್ದ ಅಂಗಡಿ ಅವರನ್ನು ಕಳೆದುಕೊಂಡ ನಾನು ಈಗ ಏಕಾಂಗಿಯಾಗಿದ್ದೇನೆ ಎಂದಿದ್ದಾರೆ.

ನಾನು ಕಾಂಗ್ರೆಸ್ ನಲ್ಲಿ ಇದ್ದಾಗಲೂ ನಿಕಟ ಸಂಪರ್ಕವಿತ್ತು. ಆಗಲೂ ಕೂಡ ನಾವಿಬ್ಬರೂ ಪಕ್ಷಭೇದ ಮರೆತು ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದೇವೆ.

ನಾನು ಕಾಂಗ್ರೆಸ್ ನಿಂದ ಬಿಜೆಪಿ ಬರುವುದಕ್ಕೆ ಪ್ರಮುಖ ಕಾರಣರೂ ಸುರೇಶ್ ಅಂಗಡಿ ಅವರು ಎನ್ನುವುದು ಸತ್ಯ.

ಕೊರೊನಾ ಸಮಯದಲ್ಲಿ ಸೋಂಕನ್ನು ಲೆಕ್ಕಿಸದೆ ಟಾಸ್ಕ್’ ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದೆವು.

ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿ ಭಾಗ ರಕ್ಷಣೆ, ಅನ್ನದಾತರಿಗಾಗಿ ವಿವಿಧ ಯೋಜನ,ಕಿಸಾನ್ ರೈಲು, ಕಳಸಾ ಬಂಡೂರಿ ಯೋಜನೆ ಸೇರಿದಂತೆ ಅನೇಕ ಕಾರ್ಯಗಳಿಗೆ ಮುಂಚೂಣಿಯಲ್ಲಿ ನಿಂತು ಅಂಗಡಿಯವರು ಕಾರ್ಯನಿರ್ವಹಿಸುವುದರೊಂದಿಗೆ ಬೇರೆಯವರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು.

ಇವರ ಮಾರ್ಗದರ್ಶನದಲ್ಲಿ ನಾನು ಸಚಿವ ಸ್ಥಾನ ನಿಲ್ಲಲು ಸ್ಫೂರ್ತಿ ಎಂದರು.

Edited By : Nirmala Aralikatti
PublicNext

PublicNext

24/09/2020 01:58 pm

Cinque Terre

49.2 K

Cinque Terre

0

ಸಂಬಂಧಿತ ಸುದ್ದಿ