29ವಯಸ್ಸಿನ ಹರ್ನಾಮ್ ಕೌರ್ ಕಿರಿಯ ವಯಸ್ಸಿನ ಗಿನ್ನಿಸ್ ದಾಖಲೆಯ ಗಡ್ದ ಸುಂದರಿ. ತನ್ನ ಆತ್ಮವಿಶ್ವಾಸದಿಂದ ಸಾಂಪ್ರದಾಯಿಕ ಬ್ಯೂಟಿ ಸ್ಟೇಟ್ಮೆಂಟ್ಗೆ ಸೆಡ್ಡು ಹೊಡೆದ ಹರ್ನಾಮ್ ಕೌರ್ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್.
ಹರ್ನಾಮ್ ಕೌರ್ ಪೂರ್ಣ ಗಡ್ಡವನ್ನು ಹೊಂದಿರುವ ಕಿರಿಯ ಮಹಿಳೆ ಎಂಬ ವಿಶ್ವ ದಾಖಲೆ ಇರೋ ಹೆಣ್ಣು ಮಗಳು. 12ನೇ ವಯಸ್ಸಿನಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ನಿಂದ ಅವಳು ಬಳಲುತ್ತಿರುವುದು ಗೊತ್ತಾಯಿತು. ಈ ಸಮಸ್ಯೆಯಲ್ಲಿ ಗಡ್ಡಮೀಸೆಯ ಬೆಳವಣಿಗೆ ಕಾರಣವಾಗುವ ಟೆಸ್ಟೆಸ್ಟೋರೋನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ.
ಆರಂಭದಲ್ಲಿ ನಿರಂತರ ಬುಲ್ಲಿಂಗ್ ಮತ್ತು ಮುಜುಗರದಿಂದ ಕೌರ್ ಮುಖದ ಕೂದಲನ್ನು ತೆಗೆಯಲು ಪ್ರಯತ್ನಿಸಿದ್ದಳು. ಖಿನ್ನತೆಯಿಂದ ಆತ್ಮಹತ್ಯೆಗೂ ಕೈ ಹಾಕಿದ್ದ ಹರ್ನಾಮ್ ತನ್ನ ಧ್ವನಿಯ ಮೂಲಕ ಇತರರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದ್ದಾರೆ. ಮೊದಲು ಶಾಲೆಯಲ್ಲಿ ಬೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಅವಮಾನಗಳ ಮೂಲಕವೇ ಇದೀಗ ಗೆದ್ದು ಬೀಗುತ್ತಿರುವ ಹರ್ನಾಮ್ ಈಗ ಇನ್ಸ್ಟಾಗ್ರಾಮ್ ತಾರೆ. 2014ರಲ್ಲಿ, ಲಂಡನ್ ಫ್ಯಾಶನ್ ವೀಕ್ನಲ್ಲಿ ರಾಂಪ್ ನಡೆದ ಗಡ್ಡವನ್ನು ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
PublicNext
12/10/2022 06:28 pm