ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿಯಲ್ಲಿ ಕುಳಿತು ತಿನಿಸು ಮಾರುತ್ತಿದ್ದಾನೆ ಅಪ್ಘನ್ ಟಿವಿ ನಿರೂಪಕ!

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರಕಾರ ಬಂದಿದ್ದೇ ಬಂದಿದ್ದು ಅಲ್ಲಿನ ಪತ್ರಕರ್ತರ ಸ್ಥಿತಿ ಹೀನಾಯಗೊಳ್ಳುತ್ತ ಸಾಗಿದೆ.

ಸದ್ಯ ಅಲ್ಲಿನ ವಾಹಿನಿಯೊಂದರ ನಿರೂಪಕನ ಫೋಟೋಗಳು ವೈರಲ್ ಆಗುತ್ತಿದೆ‌.‌ ವಿವಿಧ ಟಿವಿ ವಾಹಿನಿಗಳಲ್ಲಿ ನಿರೂಪಕನಾಗಿ ಕೆಲಸ ಮಾಡಿರುವ ಮೂಸಾ ಮೊಹಮ್ಮದ್ ಅಲಿ ಎಂಬಾತರು ಈಗ ತನ್ನ ಕುಟುಂಬವನ್ನು ನಿಭಾಯಿಸಲು ರಸ್ತೆ ಬದಿ ತಿಂಡಿ-ತಿನಿಸು ಮಾರುತ್ತಿದ್ದಾರೆ. ತಾಲಿಬಾನಿ ಆಡಳಿತ ಬಂದ ಮೇಲೆ ಆರ್ಥಿಕ ನಷ್ಟ ಅನುಭವಿಸಿದ ಅಪ್ಘನ್ ಟಿವಿ ವಾಹಿನಿಗಳು ಪ್ರಸಾರ ನಿಲ್ಲಿಸಿವೆ ಎಂಬ ಮಾಹಿತಿ ಇದೆ. ಹೀಗಾಗಿ ಮೂಸಾ ಮೊಹಮ್ಮದ್ ಎಂಬ ನಿರೂಪಕ ಬೇರೆ ಆದಾಯವಿಲ್ಲದೇ, ಬೇರೆ ಮಾರ್ಗವೂ ಇಲ್ಲದೇ ಉಪ ಜೀವನಕ್ಕಾಗಿ ಬೀದಿಗಳಲ್ಲಿ ತಿನಿಸು ಮಾರುತ್ತಿದ್ದಾರೆ. ಈ ಬಗ್ಗೆ ಸತಃ ಮೂಸಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

16/06/2022 10:58 pm

Cinque Terre

37.24 K

Cinque Terre

3