ನವದೆಹಲಿ : ನೆಚ್ಚಿನ ಪ್ರೀತಿ ಪಡೆಯುವುದು ಸುಲಭದ ಮಾತಲ್ಲ.ಇನ್ನು ಪ್ರೀತಿಸಿದವರನ್ನೇ ಮದುವೆಯಾಗುವುದು ಬಹುತೇಕರ ಬಾಳಲ್ಲಿ ಅಸಾಧ್ಯವಾದ ಮಾತು. ಆದ್ರಿ ಇಲ್ಲೊಬ್ಬ ಚಲುವೆ ತನ್ನ ಪ್ರಿಯಕರನಿಗಾಗಿ ದಾಡಿ ದಾಟಿ ನದಿಯಲ್ಲಿ ಈಜಿ ಬಂದು ಮದುವೆಯಾಗಿದ್ದಾಳೆ.
ಹೌದು 22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯುದ್ದಕ್ಕೂ ಈಜಿಕೊಂಡು ಭಾರತವನ್ನು ತಲುಪಿದ್ದಾಳೆ. ಯುವತಿ ಸುಂದರ್ ಬನ್ ನ ದಟ್ಟ ಕಾಡುಗಳ ಮೂಲಕ ಧೈರ್ಯದಿಂದ ಸಾಗಿ ಸುಮಾರು ಒಂದು ಗಂಟೆ ಈಜಿ ತನ್ನ ಪ್ರೀಯತಮನೊಂದಿಗೆ ಒಂದಾಗಲು ಭಾರತವನ್ನು ಪ್ರವೇಶಿಸಿದ್ದಾಳೆ.
ಬಾಂಗ್ಲಾದೇಶದ ಕೃಷ್ಣ ಮಂಡಲ್ ಎಂಬ ಯುವತಿ ಅಭಿಕ್ ಮಂಡಲ್ ಅವರನ್ನು ಫೇಸ್ ಬುಕ್ ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಆಕೆ ಬಳಿ ಪಾಸ್ ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಳು.ಮೊದಲು ಸುಂದರಬನ್ಸ್ ಗೆ ಪ್ರವೇಶಿಸಿ, ನಂತರ ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ದಿನಗಳ ಹಿಂದೆ, ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರನ್ನು ವಿವಾಹವಾದರು. ಆದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು. ಕೃಷ್ಣ ಅವರನ್ನು ಬಾಂಗ್ಲಾದೇಶ ಹೈಕಮಿಷನ್ ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
PublicNext
31/05/2022 10:57 pm