ವಾಷಿಂಗ್ಟನ್ ಡಿಸಿ: ಎಷ್ಟು ದೊಡ್ಡ ಸ್ಥಾನ ಇದ್ದರೇನು? ದೊಡ್ಡ ಅಂತಸ್ತಿಕೆ ಇದ್ದರೇನು ? ಎಂತದ್ದೇ ಪರಿಸ್ಥಿತಿ ಬಂದರೇನು? ನಾವು ದುಡಿಮೆಯಿಂದ ವಿಮುಖರಾಗಕೂಡದು. ಈ ಮಾತಿಗೆ ಅಫ್ಘಾನಿಸ್ತಾನದ ಮಾಜಿ ವಿತ್ತ ಸಚಿವ ಉತ್ತಮ ಉದಾಹರಣೆ ಆಗಿದ್ದಾರೆ. ಸದ್ಯ ಅವರು ಅಮೆರಿಕದಲ್ಲಿ ಉಬರ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಹೌದು..! ಅಫ್ಘಾನಿಸ್ತಾನದ ಮಾಜಿ ವಿತ್ತ ಸಚಿವ ಖಾಲಿದ್ ಪಾಯೆಂದ 6 ಗಂಟೆಗಳ ದುಡಿಮೆಯಲ್ಲಿ 150 ಡಾಲರ್ ಸಂಪಾದಿಸುತ್ತಾ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಕಳೆದ ವರ್ಷ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದಿತ್ತು. ಇದರ ಬೆನ್ನಲ್ಲೇ ಆ ದೇಶವನ್ನು ತಾಲಿಬಾನ್ ಸೈನಿಕರು ಪೂರ್ಣವಾಗಿ ವಶಕ್ಕೆ ಪಡೆದರು. ಇದರ ಪರಿಣಾಮ ಅಫ್ಘಾನಿಸ್ತಾನದ ಬಹುತೇಕ ಸಚಿವರು, ಅಧಿಕಾರಿಗಳು ವಿದೇಶಗಳಿಗೆ ಪರಾರಿಯಾದರು. ಹೀಗೆ ಪರಾರಿಯಾದವರು ಇರುವ ಸ್ಥಿತಿಯಿದು. ಕಳೆದ ವರ್ಷ ಅಫ್ಘಾನಿಸ್ತಾನ ತಂತ್ರಜ್ಞಾನ ಸಚಿವ ಸೈಯದ್ ಅಹ್ಮದ್ ಶಾ ಜರ್ಮನಿಯಲ್ಲಿ ಪಿಜ್ಜಾ ಮಾರುತ್ತಿರುವುದು ಸುದ್ದಿಯಾಗಿತ್ತು! ಸದ್ಯ ಅಪಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರವೇ ರಾಜ್ಯಭಾರ ಮಾಡುತ್ತಿದೆ.
PublicNext
22/03/2022 03:21 pm