ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಉಗ್ರರ ಕಪಿಮುಷ್ಠಿಯಿಂದ ದಾವಣಗೆರೆ ಯುವಕ ತವರಿಗೆ ಬಂದಿದ್ದಾದರೂ ಹೇಗೆ...?

ದಾವಣಗೆರೆ: ಅಫ್ಘಾನಿಸ್ತಾನದಲ್ಲಿ ಉಗ್ರರ ಕಪಿಮುಷ್ಠಿಗೆ ಸಿಲುಕಿದ್ದ ಯುವಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬೆಂಗಳೂರಿಗೆ ಬಂದಿದ್ದಾರೆ.

ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಎಸ್. ಕೆ. ಕುಮಾರಸ್ವಾಮಿ ಅವರ ಪುತ್ರ ವಿನಯ್ ಅಫ್ಘಾನಿಸ್ತಾನದಲ್ಲಿನ ರಣಭೀಕರತೆಯಿಂದ ಸುರಕ್ಷಿತವಾಗಿ ಮರಳಿ ಬಂದಿರುವ ಯುವಕ. ಮೂಲತಃ ದಾವಣಗೆರೆ ತಾಲೂಕಿನ ಆನೆಗೋಡು ಬಳಿಯ ಸುಲ್ತಾನಿಪುರ ಗ್ರಾಮದ ಕುಮಾರಸ್ವಾಮಿ ಎಂಬುವವರ ಪುತ್ರ. ವಿನಯ್ ಹೇಳಿದ ಭಯಾನಕತೆ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ.

ತಾಲಿಬಾನಿಗಳ ಕ್ರೌರ್ಯ, ಅಟ್ಟಹಾಸ, ರಕ್ತಪಾತ, ಹೀನಾಯ ಕೃತ್ಯಗಳನ್ನು ಕಂಡಿರುವ ವಿನಯ್ ಬೆಚ್ಚಿಬಿದ್ದಿದ್ದಾರೆ. ಕಾಬೂಲ್ ನಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಮೇಲೆ ಅಫ್ಘಾನಿಸ್ತಾನದ ಜನರು ಕೂತಿದ್ದು, ಅಲ್ಲಿಂದ ಪಾರಾಗಲು ಯತ್ನಿಸಿದ್ದು, ತಾಲಿಬಾನಿಗಳ ಬಂದೂಕಿನಿಂದ ಬರುತ್ತಿದ್ದ ಗುಂಡು ಎಂತವರ ಎದೆಯನ್ನು ಒಮ್ಮೆಲೆ ಝಲ್ ಎನಿಸುವಂತಿತ್ತು‌. ಕೆಲವರು ಕೆಳಗಡೆ ಬೀಳುವುದನ್ನು ನೋಡಿದ ನನಗೆ ಶಾಕ್ ಆಯ್ತು‌. ಜೊತೆಗೆ ಇಂಥ ಘಟನೆಯನ್ನು ಜೀವನದಲ್ಲಿಯೇ ಕಂಡಿರಲಿಲ್ಲ ಎನ್ನುತ್ತಾರೆ ನವೀನ್.

ಕಳೆದ ಹತ್ತು ವರ್ಷಗಳ ಹಿಂದೆ ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಇಂಸ್ಟ್ರುಮೆಂಟೇಷನ್ ಟೆಕ್ಲಾಲಜಿಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು. ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಆರ್ ಚಿ ಇಂಜಿನಿಯರಿಂಗ್ ಕಂಪೆನಿಯಲ್ಲಿ ಒಂದು ವರ್ಷ ಕೆಲಸ ಮಾಡಿ ಬಳಿಕ ಅಂದರೆ 2013 ರಲ್ಲಿ ಅಫ್ಘಾನಿಸ್ತಾನದಲ್ಲಿ ಆಟೋಮೆಷನ್ ಇಂಜಿನಿಯರಿಂಗ್ ಕೆಲಸಕ್ಕೆ ಆಯ್ಕೆಯಾಗಿದ್ದರು. ಕಂದಹಾರ್ ನಲ್ಲಿ ಕೆಲಸ ಶುರು ಮಾಡಿದ ವಿನಯ್, 2017ರವರೆಗೆ ಅಲ್ಲಿಯೇ ಕೆಲಸ ಮಾಡ್ತಿದ್ದರು.2018ರ ಬಳಿಕ ಕಾಬೂಲ್ ನಲ್ಲಿನ ಹಮೀದ್ ಕರ್ಜೈನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಕೆಲಸ ಮಾಡುತ್ತಿದ್ದರು. ವಿನಯ್ ಸುರಕ್ಷಿತವಾಗಿ ಮರಳಿ ಬಂದಿರುವುದು ಕುಟುಂಬದವರಿಗೆ ಸಂತಸ ತಂದಿದೆ.

Edited By : Manjunath H D
PublicNext

PublicNext

25/08/2021 05:08 pm

Cinque Terre

139.84 K

Cinque Terre

4