ಬಳ್ಳಾರಿ: ಕೊರೊನಾ ಸೋಂಕು ಇನ್ನೂ ಒಂದೂವರೆ ವರ್ಷ ಜನರನ್ನು ಕಾಡಲಿದೆ., ಹೋಗುವಾಗ ಹೆಚ್ಚು ಕಾಟ ಕೊಟ್ಟು ಹೋಗುತ್ತದೆ ಎಂದು ಕೋಡಿಹಳ್ಳಿ ಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ಅವರು ಬಳ್ಳಾರಿಯ ಕಾಂಗ್ರೆಸ್ ಮುಖಂಡ ಸುನೀಲ್ ರಾವೂರ್ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೊರೊನಾ ಒಂದೂವರೆ ವರ್ಷದಲ್ಲಿ ಹೋಗುತ್ತೆ. ಆದರೆ ಹೋಗುವಾಗ ತುಂಬಾ ಕಷ್ಟ ಕೊಟ್ಟು ಹೋಗುತ್ತೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ. ಅಷ್ಟೊಂದು ನೋವನ್ನು ಕೊಡುತ್ತೆ ಎಂದು ಶ್ರೀಗಳು ತಿಳಿಸಿದ್ದಾರೆ. ಕೋವಿಡ್ ವಿಶೇಷವೇನೆಂದರೆ, ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ ಮಾಡ್ತಾನೆ. ಕೋವಿಡ್ ನೇರವಾಗಿ ಬಂದು ದೇವರನ್ನೇ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸಿತು. ಆಮೇಲೆ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು ಎಂದು ಹೇಳಿದ್ದಾರೆ.
PublicNext
12/06/2022 11:00 pm