ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳದಲ್ಲಿ ವಿಮಾನ ದುರಂತ: ಅಪಘಾತಕ್ಕೆ ಬಲಿಯಾದ ವಿಚ್ಛೇದಿತ ದಂಪತಿ ಮತ್ತು ಮಕ್ಕಳು

ಕಠ್ಮಂಡು: ನೇಪಾಳದ ಮುಸ್ತಾಂಗ್ ಜಿಲ್ಲೆಯ ಮನಾಪತಿ ಹಿಮಲ್ ಎಂಬ ಪರ್ವತ ಪ್ರದೇಶದಲ್ಲಿ ಕಳೆದ ರವಿವಾರ ವಿಮಾನ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 22 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ವಿಚ್ಚೇದಿತ ದಂಪತಿ ಹಾಗೂ ಮಕ್ಕಳು ಕೂಡ ಮೃತಪಟ್ಟಿರುವುದು ಗೊತ್ತಾಗಿದೆ.

ಘಟನೆಯಲ್ಲಿ ಮುಂಬಯಿಯ ವಿಚ್ಛೇದಿತ ದಂಪತಿ ಅಶೋಕ್ ಕುಮಾರ್, ವೈಭವಿ ಹಾಗೂ ಇಬ್ಬರು ಮಕ್ಕಳ ಪ್ರವಾಸ ದುರಂತದಲ್ಲಿ ಅಂತ್ಯಕಂಡಿದೆ. ಒಡಿಶಾ ಮೂಲದ ಉದ್ಯಮಿ ಅಶೋಕ್ ಕುಮಾರ್ ತ್ರಿಪಾಠಿ ಹಾಗೂ ಥಾಣೆ ಮೂಲದ ಪತ್ನಿ ವೈಭವಿ ಬಾಂದೇಕರ್ ತ್ರಿಪಾಠಿ ವಿಚ್ಛೇದನಗೊಂಡಿದ್ದು, ಕೋರ್ಟ್ ಆದೇಶದ ಪ್ರಕಾರ ವರ್ಷದಲ್ಲಿ ಹತ್ತು ದಿನಗಳ ಕಾಲ ಒಟ್ಟಿಗೆ ಇರಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಅವರು ವಿಚ್ಛೇದಿತ ಪತ್ನಿ ವೈಭವಿ, ಮಕ್ಕಳಾದ ಧನುಷ್ (22ವರ್ಷ), ಮಗಳು ರಿತಿಕಾ (15ವರ್ಷ) ಜತೆ 10 ದಿನಗಳ ನೇಪಾಳ ಪ್ರವಾಸ ಕೈಗೊಂಡಿದ್ದರು. ಆದರೆ ವಿಧಿ ವಿಪರ್ಯಾಸ ಎಂಬಂತೆ ಭಾನುವಾರ(ಮೇ 29) ನೇಪಾಳದ ಪೋಖ್ರಾದಿಂದ ವಿಮಾನ ಹೊರಟಿದ್ದು, ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಇದೇ ವಿಮಾನದಲ್ಲಿ ವಿಚ್ಛೇದಿತ ದಂಪತಿ ಹಾಗೂ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ.

Edited By : Nagaraj Tulugeri
PublicNext

PublicNext

01/06/2022 03:27 pm

Cinque Terre

46.88 K

Cinque Terre

0

ಸಂಬಂಧಿತ ಸುದ್ದಿ