ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SSLCಯಲ್ಲಿ 35,36,38 ಅಂಕಪಡೆದ ವಿದ್ಯಾರ್ಥಿ ಈಗ ಜಿಲ್ಲಾಧಿಕಾರಿ!

ನವದೆಹಲಿ: ಇಂದಿನ ಶಿಕ್ಷಣ ವ್ಯವಸ್ಥೆಗಳ ಬಗ್ಗೆ ಕಾಮೆಂಟ್ ಇದ್ದೇ ಇದೆ. ಆಮೀರ್ ಖಾನ್ ಕೂಡ ಶಿಕ್ಷಣ ಪದ್ದತಿ ಬದಲಾಗಬೇಕು ಅಂತ ತಾರೆ ಜಮೀನ್ ಪರ ಸಿನಿಮಾನೇ ಮಾಡಿದರು. ಇಂತಹ ಈ ವ್ಯವಸ್ಥೆಯಲ್ಲಿ ಅಂಕಗಳ ಹಿಂದೆ ಬಿದ್ದಿರೋ ಪೋಷಕರು ಮಕ್ಕಳು ಕಣ್ತೆರದು ನೋಡುವಂತೆ ಮಾಡಿದ್ದಾರೆ ಜಿಲ್ಲಾಧಿಕಾರಿಯೊಬ್ಬರು.

ಹೌದು.ಗುಜರಾತಿನ ಭರುಚ್ ಜಿಲ್ಲೆಯ ಜಿಲ್ಲಾಧಿಕಾರಿ ತುಷಾರ್ ಡಿ.ಸಮೇರಾ ಅವರ 10ನೇ ತರಗತಿಯ ಅಂಕಪಟ್ಟಿಯನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲಾಗಿದೆ. ಇನ್ನೇನೂ ಬೋರ್ಡ್ ಎಕ್ಸಾಂನ ರಿಸಲ್ಟ್ ಹೊರ ಬೀಳುತ್ತದೆ. ಅದರ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯ ತುಂಬಲು ಈ ಒಂದು ಕೆಲಸ ಮಾಡಿದ್ದಾರೆ.

ತುಷಾರ್ ಅವರ SSLC ಪರೀಕ್ಷೆ ಅಂಕಪಟ್ಟಿ ನೋಡಿದ್ರೆ, ನಿಮಗೆ ಅಶ್ಚರ್ಯ ಅಗುತ್ತದೆ. ಇಂಗ್ಲೀಷ್ ನಲ್ಲಿ 35 ಮಾರ್ಕ್ಸ್ ತೆಗೆದಿದ್ದಾರೆ. ಗಣಿತದಲ್ಲಿ 36 ಅಂಕಗಳು ಬಂದಿವೆ. ವಿಜ್ಞಾನದಲ್ಲಿ 38 ಅಂಕ ಪಡೆದಿದ್ದಾರೆ. ಇಷ್ಟೇ ಅಂಕಗಳನ್ನ ತೆಗೆದುಕೊಂಡ ತುಷಾರ್, ಈಗ ತಮ್ಮ ಜ್ಞಾನ ಮತ್ತು ಪರಿಶ್ರಮದಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಆದರೆ, ಈ ಅಂಕಪಟ್ಟಿಯನ್ನ ಮತ್ತೊಬ್ಬ ಐಎಎಸ್ ಅಧಿಕಾರಿಯಾಗಿರೋ ಅವನೀಶ್ ಶರಣ್ ಇಲ್ಲಿ ಹಂಚಿಕೊಂಡಿದ್ದಾರೆ. ಏನೂ ಆಗೋದೇ ಇಲ್ಲ ಈ ತುಷಾರ್ ಕಡೆಗೆ ಅಂದ ಹಳ್ಳಿ ಜನರೇ ಈಗ ತುಷಾರ್ ಸಾಧನೆಯನ್ನ ಮೆಚ್ಚಿಕೊಂಡು ಕೊಂಡಾಡಿದ್ದಾರೆ ಅಂತಲೂ ಅವನೀಶ್ ಶರಣ್ ಬರೆದುಕೊಂಡಿದ್ದಾರೆ

Edited By :
PublicNext

PublicNext

14/06/2022 09:24 am

Cinque Terre

31.39 K

Cinque Terre

0

ಸಂಬಂಧಿತ ಸುದ್ದಿ