ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಎಎಸ್ ಪಾಸ್, ಮಹಿಳಾ ಸಮುದಾಯಕ್ಕೆ ಮಾದರಿಯಾದ ಶಿವಾಂಗಿ..!

ಲಕ್ನೋ: ಮದುವೆ ಆದ್ರೆ ಸಾಕು ಸಂಸಾರದ ಜಂಜಾಟದಲ್ಲಿ ಬ್ಯೂಸಿ ಆಗುತ್ತಾರೆ. ಅದೆಲ್ಲವನ್ನೂ ಮೀರಿ ಏಳು ವರ್ಷದ ಬಾಲಕಿಯ ತಾಯಿಯೊಬ್ಬಳು 2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 177ನೇ ರ್‍ಯಾಂಕ್ ಪಡೆಯುವ ಮೂಲಕ ಮಹಿಳಾ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

ಹೌದು. ಹಾಫುರ್್ನ ಪಿಲ್ಖುವಾ ನಿವಾಸಿ ಶಿವಾಂಗಿ ಗೋಯಲ್ ಅವರು ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಗೌರವ ತರುವುದರ ಮೂಲಕ ಮಹಿಳಾ ಸಮುದಾಯಕ್ಕೂ ಮಾದರಿಯಾಗಿದ್ದಾರೆ. ಶಿವಾಂಗಿ ಮದುವೆಯಾಗಿದ್ದು, ಮಗಳಿದ್ದಾಳೆ. ಅತ್ತೆ-ಮಾವಂದಿರ ಕಿರುಕುಳದಿಂದ ಬೇಸತ್ತ ಆಕೆ ತನ್ನ ತಂದೆ- ತಾಯಿಯೊಂದಿಗೆ ವಾಸಿಸತೊಡಗಿದಳು. ಆಕೆ ವಿಚ್ಚೇದನ ಅರ್ಜಿ ಕೂಡಾ ಇನ್ನೂ ಕೋರ್ಟ್ ನಲ್ಲಿದೆ.

ಸಮಾಜದಲ್ಲಿರುವ ವಿವಾಹಿತ ಮಹಿಳೆಯರಿಗೆ ತಮ್ಮ ಅತ್ತೆಯ ಮನೆಯಲ್ಲಿ ಏನಾದರೂ ತೊಂದರೆಯಾದರೆ ಭಯಪಡಬೇಡಿ. ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ನೀಡಲು ಬಯಸುವೆ. ಕಷ್ಟಪಟ್ಟು ಚೆನ್ನಾಗಿ ಓದಿದರೆ ಐಎಎಸ್ ಆಗಬಹುದು ಎಂದು ಶಿವಾಂಗಿ ತನ್ನ ಅನುಭವ ಹಂಚಿಕೊಂಡರು. ಮನಸ್ಸು ಮಾಡಿದರೆ ಎಲ್ಲವನ್ನು ಸಾಧಿಸಬಹುದು ಎನ್ನುವುದಕ್ಕೆ ಶಿವಾಂಗಿ ಮಾದರಿಯಾಗಿದ್ದಾರೆ.

Edited By : Vijay Kumar
PublicNext

PublicNext

31/05/2022 10:11 pm

Cinque Terre

28.09 K

Cinque Terre

0

ಸಂಬಂಧಿತ ಸುದ್ದಿ