ಬೆಂಗಳೂರು: ಅಂತೂ ಇಂತೂ ಎಲ್ಲ ಕೊರೊನಾ ತೊಲಗಿ ಸಹಜ ಸ್ಥಿತಿ ಬಂತು ಎಂದ ಜನ ರಿಲ್ಯಾಕ್ಸ್ ಆಗಿದ್ರು. ಆದ್ರೆ ಕಳೆದ ಒಂದು ವಾರದಿಂದ ಮತ್ತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದೆ. ಮತ್ತೊಂದು ಕಡೆ ದೇಶಕ್ಕೆ ಮಂಕಿಪ್ಯಾಕ್ಸ್ ಆತಂಕ ಜಾಸ್ತಿ ಆಗಿದೆ. ಹೀಗಾಗಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು ಮತ್ತೆ ಕಟ್ಟೆಚ್ಚರ ವಹಿಸಿದೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
ಹೌದು...ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಹಾಗೂ ಜೂನ್ ಕೊನೆಗೆ 4 ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಆಗಿ ಸಭೆ ನಡೆಸಿದೆ. ಈ ಸಭೆಯಲ್ಲಿ ಮತ್ತೆ ಹಲವು ನಿಯಮಗಳನ್ನು ಜಾರಿ ಮಾಡಿದೆ.
ಮತ್ತೆ ರಾಜ್ಯದಲ್ಲಿ ಕೊರೊನ ರೂಲ್ಸ್, ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು
ಹೌದು ಕೋವಿಡ್ ಜಾಸ್ತಿಯಾದ ಹಿನ್ನೆಲೆ ಮಾರ್ಷಲ್ ಗಳು ಮಾಸ್ಕ್ ಕಡ್ಡಾಯ ಪಾಲಿಸುವ ಕುರಿತು ಪರಿಶೀಲಿಸುತ್ತಿರಬೇಕು, ಸದ್ಯಕ್ಕೆ ಮಾಸ್ಕ್ ದಂಡದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಕೊರೊನ ನಿಯಮ ಗಂಭೀರವಾಗಿ ಪರಿಗಣಿಸಬೇಕು ಅಂತ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಇನ್ನು ಇತ್ತ ಮತ್ತೊಂದು ಕಡೆ ಜನರು ಈಗ ಮತ್ತೇ ಮಂಕಿಪಾಕ್ಸ್ ಸೋಂಕಿಗೆ ತಲೆ ಬಿಸಿ ಮಾಡಿಕೊಂಡಿದ್ದಾರೆ. ಮಂಕಿಪಾಕ್ಸ್ ಸೋಂಕಿನ ಆಂತಕ ಹೆಚ್ಚಾಗಿದ್ದು ಆರೋಗ್ಯ ಇಲಾಖೆಯಿಂದ ಜಿಲ್ಲಾಸ್ಪತ್ರೆಗಳಿಗೆ ಹೊಸ ಆದೇಶವನ್ನು ನೀಡಲಾಗಿದೆ .
ಒಟ್ಟಿನಲ್ಲಿ ಸದ್ಯ ರಾಜ್ಯದ ಹಾಗೂ ದೇಶದ ಪರಿಸ್ಥಿತಿ ಹೇಗಾಗಿದೆ ಅಂತಂದ್ರೆ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎನ್ನುವ ಹಾಗಾಗಿದೆ. ಇದರಂತೆ ಒಂದಲ್ಲ ಒಂದು ರೋಗ ವಕ್ಕರಿಸುತ್ತಿದೆ . ಹೀಗಾಗಿ ಜನ ಜೀವನದ ಜೊತೆ ಜೀವನ್ನು ಕೂಡ ಕಾಪಾಡಿಕೊಳ್ಳುವ ಅಗತ್ಯವಿದೆ .
PublicNext
07/06/2022 06:38 pm