ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾರದ ಪುಡಿ, ಚಾಕು ಹಿಡಿದು ಫುಟ್ ಪಾತ್ ಮೇಲೆ ಮಲಗುತ್ತಾರೆ ಅಮ್ಮ-ಮಗಳು!

ಬೆಂಗಳೂರು: ಇವರ ಪಾಲಿಗೆ ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ. ಕಣ್ತುಂಬ ನಿದ್ದೆ ಬಾರದು ಇವರಿಗೆ. ಎಷ್ಟು ದುಡಿದರೂ ನೀಗುತ್ತಿಲ್ಲ ಬಡತನದ ಬೇಗೆ!

ಇದು ಅಮ್ಮ-ಮಗಳ ಕರುಣಾಜನಕ ಬದುಕಿನ ವಾಸ್ತವ. ಲಾಕ್ ಡೌನ್ ಸಮಯದಲ್ಲಿ ಮನೆ ಬಾಡಿಗೆ ಕಟ್ಟಲಾಗದೇ ಇವರು ಬೆಂಗಳೂರಿನ "ಗಾಂಧಿ"ನನಗರದ ಫುಟ್ ಪಾತ್ ಮೇಲೆ ಮಲಗಿ ದಿನದೂಡುತ್ತಿದ್ದಾರೆ.

ಬಿಎ ಪದವೀಧರೆಯಾಗಿರುವ ಪೂರ್ಣಿಮಾ ದೋಬಿ ಕೆಲಸ ಮಾಡಿಕೊಂಡಿದ್ದರು. ಲಾಕ್ ಡೌನ್ ಅವಧಿಯಲ್ಲಿ ಅತ್ತ ಕೆಲಸವೂ ಇಲ್ಲದೇ ಆದಾಯವೂ ಇಲ್ಲದೇ, ಮನೆ ಬಾಡಿಗೆ ಕಟ್ಟಲಾಗದೇ ಅತಂತ್ರ ಸ್ಥಿತಿಗೆ ಸಿಲುಕಿದ್ದರು. ಕೊನೆಗೆ ಬೀದಿಯೇ ಗತಿ ಎಂಬಂತಾಗಿ ಕಳೆದ ಹಲವು ತಿಂಗಳಿಂದ ಅಮ್ಮ ತುಳಸಿ ಹಾಗೂ ಮಗುವಿನೊಂದಿಗೆ ಪೂರ್ಣಿಮಾ ಅವರು ಫುಟ್ ಪಾತ್ ಮೇಲೆ ತಾಡಪತ್ರಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ‌.

ಪೂರ್ಣಿಮಾ ಅವರ ಮದುವೆಯಾಗಿ ಮಗು ಆದ ಮೇಲೆ ಗಂಡ ಬಿಟ್ಟು ಹೋಗಿದ್ದಾನೆ. ಈ ಕಡೆ ಕಾಯಿಲೆ ಬಿದ್ದ ಅಮ್ಮ, ಮಗು ಇಬ್ಬರನ್ನೂ ಚಿಕ್ಕಾಸಿನ ಆದಾಯದಲ್ಲಿ ನಿಭಾಯಿಸುವುದು ಕಷ್ಟವಾಗುತ್ತಿದೆ. ಮಳೆ ಬಂದಾಗ ದಿಗಿಲು ಬಡಿದಂತಾಗುತ್ತೆ. ಲಾಕ್ ಡೌನ್ ಸಮಯದಲ್ಲಿ ಯಾರೂ ನಮ್ಮತ್ತ ತಿರುಗಿಯೂ ನೋಡಲಿಲ್ಲ. ರೇಶನ್ ಕೊಡಲಿಲ್ಲ‌. ಹೀಗಾಗಿ ಅದೆಷ್ಟೋ ರಾತ್ರಿ ಹಸಿವಿನಿಂದ ಇದೇ ಬೀದಿಯಲ್ಲಿ ಮಲಗಿದ್ದೇವೆ. ಕೆಲ ಬೀದಿ ಕಾಮಣ್ಣರು ರಾತ್ರಿ ಹೊತ್ತು ಬಂದು ಕಾಟ ಕೊಡ್ತಾರೆ ಎಂದು ಪೂರ್ಣಿಮಾ ಅವರು ಅಳಲು ತೋಡಿಕೊಂಡಿದ್ದಾರೆ.

ಆಶ್ರಯ ಮನೆಗಾಗಿ ಇವರು ಅನೇಕ ಬಾರಿ ಅರ್ಜಿ ಹಾಕಿದ್ದಾರೆ. ಆದರೂ ಮನೆ ಮಂಜೂರಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ನಮಗೆ ಸೂರು ಒದಗಿಸಬೇಕೆಂದು ತಾಯಿ ತುಳಸಿ ಹಾಗೂ ಮಗಳು ಪೂರ್ಣಿಮಾ ಅವಲತ್ತುಕೊಂಡಿದ್ದಾರೆ‌

Edited By : Nagaraj Tulugeri
PublicNext

PublicNext

20/12/2020 08:45 am

Cinque Terre

118.08 K

Cinque Terre

14