ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಲಾಸಕ್ಕೆ ಕಾಸಿಲ್ಲದೆ ವೀಸಾ : ಭಕ್ತರಿಗೆ ಬಂಪರ್ ಆಫರ್ ಕೊಟ್ಟ ನಿತ್ಯಾನಂದ!

ಬೆಂಗಳೂರು: ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ಇದೀಗ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ತನ್ನ ಭಕ್ತರಲ್ಲಿ ಮನವಿ ಮಾಡಿದ್ದಾನೆ.

ಫೇಸ್ ಬುಕ್ ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಇದೀಗ ಅದೇ ವಿಡಿಯೋ ಮೂಲಕ ಭಕ್ತರಿಗೆ ಕೈಲಾಸಕ್ಕೆ ಬರಲು ಆಫರ್ ನೀಡಿದ್ದಾರೆ

ಆಸ್ಪ್ರೇಲಿಯಾಕ್ಕೆ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್ ಚಾರ್ಟೆಟ್ ಪ್ಲೇನ್ ನಲ್ಲಿ ನಿಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಬರಲಾಗುವುದು ಎಂದು ಹೇಳಿದ್ದಾನೆ.

ಇನ್ನು ಕೈಲಾಸಕ್ಕೆ ಬರಲು ವೀಸಾಕ್ಕೆ ಯಾವುದೇ ಶುಲ್ಕವಿಲ್ಲ ಎಂದಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ತನ್ನದೇ ಆದ ರಿಸರ್ವ್ ಬ್ಯಾಂಕ್ ನ್ನು ತೆರೆದಿರುವುದಾಗಿಯೂ ಆತ ಹೇಳಿಕೊಂಡಿದ್ದ.

Edited By : Nirmala Aralikatti
PublicNext

PublicNext

17/12/2020 07:42 pm

Cinque Terre

75.13 K

Cinque Terre

10

ಸಂಬಂಧಿತ ಸುದ್ದಿ