ಧಾರವಾಡ : ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ಹೆತ್ತು ಹೊತ್ತು ಸಾಕಿ ಬೆಳೆಸಿದ ಮಕ್ಕಳು ಒಮ್ಮಿದೊಮ್ಮೆಲೆ ಪ್ರಾಣ ಕಳೆದುಕೊಂಡರೆ ಅದರಿಂದಾಗುವ ಸಂಕಟ, ವೇದನೆ ಅಷ್ಟಿಷ್ಟಲ್ಲ. ಆ ಸಂಕಟ ಕೇವಲ ಮನುಷ್ಯರಿಗೆ ಮಾತ್ರ ಆಗಬೇಕೆಂದೇನಿಲ್ಲ. ಪ್ರಾಣಿಗಳಿಗೂ ಆ ವೇದನೆಯಾಗುತ್ತದೆ. ಅದಕ್ಕೆ ತಾಜಾ ಉದಾಹರಣೆಯೊಂದು ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿ ನಡೆದಿದೆ.
ರಾಮನಾಳ ಗ್ರಾಮದ ಸುನೀಲ ಹೆಬ್ಬಳ್ಳಿ ಎಂಬುವವರ ಮೊಲ ಸಾಕಾಣಿಕೆ ಕೇಂದ್ರಕ್ಕೆ ನಿನ್ನೆ ನುಗ್ಗಿದ ನಾಗರ ಹಾವೊಂದು ನಾಲ್ಕು ಮೊಲದ ಮರಿಗಳನ್ನು ಕಚ್ಚಿ ಸಾಯಿಸಿದೆ. ಇತ್ತ ತನ್ನ ಮರಿಗಳನ್ನು ಕಳೆದುಕೊಂಡ ತಾಯಿ ಮೊಲ ತಾನು ವಿಷಕಾರಿ ಅಲ್ಲದಿದ್ದರೂ ಕಂಠಪೂರ್ತಿ ವಿಷ ತುಂಬಿಕೊಂಡ ನಾಗರಹಾವಿನೊಂದಿಗೆ ಸೆಣಸಾಟಕ್ಕಿಳಿದಿದೆ. ಮೊಲ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂಬ ವೀಡಿಯೋವನ್ನು ಸುನೀಲ ಅವರೇ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ತನ್ನ ಮರಿಗಳನ್ನು ಕಳೆದುಕೊಂಡ ನೋವಿನಲ್ಲಿ ತಾಯಿ ಮೊಲ ಆ ನಾಗರ ಹಾವಿಗೆ ಸಾಕಷ್ಟು ತೊಂದರೆ ಕೊಟ್ಟು ಫಾರ್ಮಿನಿಂದ ಹೊರ ಹಾಕಿದೆ. ಇತ್ತ ಅದೇ ತಾನೆ ಕಣ್ಣುಬಿಟ್ಟಿದ್ದ ಮೊಲದ ಮರಿಗಳು ಅಮಾನುಷವಾಗಿ ಹಾವಿಗೆ ಬಲಿಯಾಗಿ ಬಿದ್ದಿದ್ದ ದೃಶ್ಯಗಳು ಮನಕಲಕುವಂತಿತ್ತು.
PublicNext
14/12/2020 04:31 pm