ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗು ಹೂತಿದ್ದ ಜಾಗದಿಂದ ನಾಪತ್ತೆ : ಮೃತದೇಹ ಏನಾಯಿತು?

ಲಕ್ನೋ : ಸಮಾಧಿ ಮಾಡಿದ ಜಾಗದಿಂದ 4 ವರ್ಷದ ಮಗುವಿನ ಮೃತದೇಹ ಕಾಣೆಯಾಗಿದೆ ಎಂದು ಉತ್ತರ ಪ್ರದೇಶದ ಬುಲಂದ್ಶಹರ್ ನ ಖಾನ್ಪುರ್ ಪೊಲೀಸ್ ಠಾಣೆ ಪ್ರದೇಶದಿಂದ ಆಘಾತಕಾರಿ ಪ್ರಕರಣ ಹೊರಬಿದ್ದಿದೆ.

ಉತ್ತರ ಪ್ರದೇಶದ ಥೋನಾ ಗ್ರಾಮದಲ್ಲಿ 4 ವರ್ಷದ ಮಗುವೊಂದು ಜ್ವರದಿಂದ ಬುಧವಾರ ಮೃತಪಟ್ಟಿದೆ.

ಮಗುವಿನ ಮರಣದ ನಂತರ ಕುಟುಂಬಸ್ಥರು ಮಗುವಿನ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದಿದ್ದರು. ಮೃತ ದೇಹವನ್ನು ಆ ರಾತ್ರಿ ಸಮಾಧಿಯಿಂದ ಹೊರತೆಗೆದಿದ್ದಾರೆ ಎಂಬ ವಿಷಯ ವೈರಲ್ ಆಗಿದೆ.

ಈ ಸುದ್ದಿಯಿಂದ ಅನುಮಾನಗೊಂಡ ಕುಟುಂಬಸ್ಥರು ಸಮಾಧಿಯನ್ನು ಅಗೆದು ನೋಡಿದ್ದಾರೆ.

ಆದರೆ ಮಗುವಿನ ಮೃತದೇಹ ಸಮಾಧಿ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಈ ವಿಚಾರವಾಗಿ ಮೃತ ಮಗುವಿನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ಮಾಟ-ಮಂತ್ರಕ್ಕಾಗಿ ಮಗುವಿನ ದೇಹವನ್ನು ತೆಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

03/12/2020 07:02 pm

Cinque Terre

41.21 K

Cinque Terre

0