ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಲೆಯೊಂದರಲ್ಲಿ ರಾತ್ರಿಯಿಡೀ ಇದ್ದಕ್ಕಿದ್ದಂತೆಯೇ ಬಡಿದುಕೊಂಡ ಬಾಗಿಲಿನಿಂದ ಸುತ್ತಲಿನ ಜನ ಭಯಭೀತರಾಗಿ ಕಂಗೆಟ್ಟುಹೋದ ಘಟನೆ ನಡೆದಿದೆ.
ಇದು ನಿಜಕ್ಕೂ ನಿಜ. ಸುಮಾರು ಹೊತ್ತು ಹೀಗೆ ಕಾರವಾರದ ಶಾಲೆಯೊಂದರ ಕೋಣೆ ಬಾಗಿಲು ಒಳಗಿನಿಂದ ಬಡಿದುಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಗಾಬರಿಯಾಗಿದ್ದಾರೆ. ಇದು ಭೂತ ಇರಬಹುದಾ ಎಂಬ ಭಯದಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಅಲ್ಲಿ ಬಂದ ಪೊಲೀಸರು ಬಾಗಿಲು ಸದ್ದಾಗುತ್ತಿದ್ದ ಕೋಣೆಯ ಬೀಗ ತೆಗೆಸಿದ್ದಾರೆ. ಬೀಗ ತೆಗೆದಿದ್ದೇ ತಡ ಒಳಗಿಂದ ಹೊರ ಬಂದಿದ್ದು ದೆವ್ವ ಅಲ್ಲ. ನಾಯಿ!
ಅಷ್ಟೊತ್ತಿನವರೆಗೂ ಬೆಚ್ಚಿ ಬಿದ್ದು ಕಂಗಾಲಾಗಿದ್ದ ಸ್ಥಳೀಯರು, ಕೋಣೆಯಿಂದ ನಾಯಿ ಹೊರ ಬಂದದ್ದನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಶ್ವಾನ ಚೇಷ್ಟೆಯ ಸಂಪೂರ್ಣ ವಿಡಿಯೋ ನಿಮಗಾಗಿ ಇಲ್ಲಿದೆ.
PublicNext
03/12/2020 01:38 pm