ಪ್ರೀತಿ ಅಂದ್ರೆ ಹೀಗೆ ಹುಟ್ಟಿ, ಹಾಗೆ ಸಾಯುವುದಲ್ಲ ಕಣ್ರೀ. ಅದೊಂದು ಮದುರ ಬಾಂಧವ್ಯ. ಜೀವನದುದ್ದಕ್ಕೂ ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಆತ್ಮವಿಶ್ವಾಸ ಮೂಡಿಸುವ ಶಕ್ತಿ ಪ್ರೀತಿಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಸಾಕಷ್ಟು ವೃದ್ಧ ದಂಪತಿಯ ಹೃದಯಸ್ಪರ್ಶಿ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇಂತಹದ್ದೇ ವಿಡಿಯೋವೊಂದು ಹೃದಯಸ್ಪರ್ಶಿ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉತ್ತರ ಇಟಲಿಯ ಕ್ಯಾಸ್ಟೆಲ್ ಸ್ಯಾನ್ ಜಿಯೋವಾನ್ನಿಯ ಆಸ್ಪತ್ರೆಯ ಹೊರಗೆ ಇಂತಹ ಪ್ರಸಂಗ ನಡೆದಿದೆ. 81 ವರ್ಷದ ಸ್ಟೆಫಾನೋ ತಮ್ಮ ಪತ್ನಿಗೆ ಧೈರ್ಯ ತುಂಬಿದ ಅಪೂರ್ವ ದೃಶ್ಯ. ಈ ವೃದ್ಧ ಆಸ್ಪತ್ರೆಯ ಹೊರಗೆ ಕುಳಿತು ಸಂಗೀತ ನುಡಿಸುವ ಮೂಲಕ ತನ್ನ ಪತ್ನಿಗೆ ಸಾಂತ್ವನದ ಜೊತೆಗೆ ಧೈರ್ಯ, ಪ್ರೀತಿ ತೋರಿದ್ದಾರೆ.
ಕೊರೊನಾ ನಿರ್ಬಂಧಗಳ ಕಾರಣದಿಂದ ಇವರಿಗೆ ಆಸ್ಪತ್ರೆಯೊಳಗೆ ಹೋಗಲು ಅವಕಾಶವಿಲ್ಲ. ಹೀಗಾಗಿ ಪತ್ನಿಯನ್ನು ಕಾಣದೆ ನೊಂದಿದ್ದ ವೃದ್ಧ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಆಸ್ಪತ್ರೆಯ ಹೊರಗಡೆ ಸಂಗೀತ ನುಡಿಸಿದ್ದಾರೆ. ಇದನ್ನು ಇವರ ಪತ್ನಿ ಕಾರ್ಲಾ ಸಾಚಿ ಎರಡನೇ ಮಹಡಿಯಲ್ಲಿ ನಿಂತು ನೋಡಿ ಸಮಾಧಾನ ತಂದುಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ಆಸ್ಪತ್ರೆಯ ಇತರ ರೋಗಿಗಳು ಮತ್ತು ಸಿಬ್ಬಂದಿ ಕೂಡಾ ಈ ಸಂಗೀತಕ್ಕೆ ಮನಸೋತಿದ್ದರು.
PublicNext
18/11/2020 01:39 pm