ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಸ್ಥಾನಕ್ಕೆ ಭೂಮಿ ದಾನ ಕೊಟ್ಟ ಮುಸ್ಲಿಂ ಕುಟುಂಬ

ಶಿವಮೊಗ್ಗ: ಎರಡು ಕೋಮುಗಳ ನಡುವೆ ಗಲಭೆಗಳು ಇತ್ತೀಚಿಗೆ ಹೆಚಚಾಗುತ್ತಿವೆ. ಆದರೆ ಗ್ರಾಮದಲ್ಲಿ ಮಾತ್ರ ಹಾಗಿಲ್ಲ. ಎಲ್ಲ ಮತ ಬಾಂಧವರು ಸಾಮರಸ್ಯದಿಂದ ಬಾಳುತ್ತಿದ್ದಾರೆ. ಈ ಸಾಮರಸ್ಯದಿಂದಲೇ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯ ನಿರ್ಮಾಣಕ್ಕೆ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ನಿವೇಶನವನ್ನು ದಾನವಾಗಿ ನೀಡಿದೆ.

ಹೌದು...ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್‍ನ ತವಕ್ಕಲ್ ಕುಟುಂಬದ ಮೊಯಿದ್ದೀನ್ ಅವರಿಗೆ ಸೇರಿದ ಜಾಗದಲ್ಲಿ ಭೂತಪ್ಪ ದೇವರು ನೆಲೆಸಿದ್ದಾನೆ. ಈ ದೇವರನ್ನು ಗ್ರಾಮದ ರಾಮಣ್ಣನ ವಂಶಸ್ಥರು ಸೇರಿದಂತೆ ಗ್ರಾಮಸ್ಥರು ಸಹ ಪೂಜಿಸಿಕೊಂಡು ಬರುತ್ತಿದ್ದರು. ಆದರೆ ಈ ಭೂಮಿ ಮುಸ್ಲಿಂ ಧರ್ಮದ ಮೊಯಿದ್ದೀನ್ ಅವರದ್ದಾಗಿತ್ತು. ತಮ್ಮ ಜಾಗದಲ್ಲಿ ಹಿಂದೂ ಧರ್ಮದ ದೇವರಿದೆ ಎಂದು ಗೊತ್ತಿದ್ದರೂ ಸಹ ಮೊಯಿದ್ದೀನ್ ಕುಟುಂಬದವರು ಇದುವರೆಗೂ ಯಾವುದೇ ತೊಂದರೆ ಕೊಡದೇ ಪೂಜಾ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮೊಯಿದ್ದೀನ್ ಅವರಿಗೆ ನಾಲ್ವರು ಮಕ್ಕಳು. ಈ ನಾಲ್ವರು ಮಕ್ಕಳು ತಂದೆಯ ಆಸ್ತಿಗಳು ಇತ್ತೀಚೆಗೆ ಭಾಗ ಮಾಡಿಕೊಂಡಿದ್ದಾರೆ. ಆಸ್ತಿ ಭಾಗ ಮಾಡಿಕೊಳ್ಳುವ ವೇಳೆ ನಾಲ್ವರು ಒಟ್ಟಿಗೆ ಕುಳಿತು ಚರ್ಚಿಸಿ, ನಂತರ ಮುಸ್ಲಿಂ ಹಾಗೂ ಹಿಂದೂ ಮುಖಂಡರನ್ನು ಸೇರಿಸಿಕೊಂಡು ತಮ್ಮ ಸ್ಥಳದಲ್ಲಿ ದೇವರಿದ್ದ ಲಕ್ಷಾಂತರ ಬೆಲೆ ಬಾಳುವ ನಿವೇಶನವನ್ನು ಭೂತಪ್ಪ ದೇವಸ್ಠಾನ ನಿರ್ಮಾಣಕ್ಕೆ ಉಚಿತವಾಗಿ ನೀಡಿದ್ದಾರೆ. ಜೊತೆಗೆ ಅದರ ಮಾಲೀಕತ್ವವನ್ನು ಸಹ ಹಿಂದೂಗಳಿಗೆ ಲಿಖಿತವಾಗಿ ಬರೆದುಕೊಡುವ ಮೂಲಕ ಪರಧರ್ಮ ಸಹಿಷ್ಣುತೆಗೆ ಉತ್ತಮ ನಿದರ್ಶನವಾಗಿದ್ದಾರೆ.

Edited By : Nagaraj Tulugeri
PublicNext

PublicNext

05/11/2020 04:06 pm

Cinque Terre

146.36 K

Cinque Terre

36