ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈ ಕೆಸರಾದರೇ ಬಾಯಿ‌ ಮೊಸರು ಎಂದುಕೊಂಡ ರೈತ ಮಹಿಳೆ: ಉಳುಮೆಯಿಂದ‌ ಬದುಕು ಕಟ್ಟಿಕೊಂಡ ತಾಯಿ

ಗದಗ: ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ರೈತ ಮಹಿಳೆಯೇ ಸಾಕ್ಷಿಯಾಗಿದ್ದಾಳೆ.

ಹೌದು..ನೀರು ಜೀವನಕ್ಕೆ ಅವಶ್ಯವಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ. ಭೂಮಿಯ ಬಹುಭಾಗ ನೀರಿನಿಂದಲೇ ಆವರಿಸಿದ್ದರೂ, ಬಳಕೆಗೆ ಯೋಗ್ಯವಾದ ನೀರು ಬಹಳ ಕಡಿಮೆ. ಆದ್ದರಿಂದ ನೈಸರ್ಗಿಕ ವರದಾನವಾಗಿ ಸಿಕ್ಕಿರುವ ನೀರನ್ನು ಮಿತವಾಗಿ ಬಳಸಿ ಉತ್ತಮ ಗುಣಮಟ್ಟದ ಫಸಲು ತೆಗೆಯುತ್ತಿರುವ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಯುವ ರೈತ ಮಹಿಳೆಯಾದ ಲಕ್ಷ್ಮವ್ವ ದೇವಪ್ಪ ಲಮಾಣಿಯವರು ತಮ್ಮ ಮದುವೆಯಾಗಿ ಸುಮಾರು 18 ವರ್ಷಗಳು ಕಳೆದರು ಈ 18 ವರ್ಷಗಳಿಂದ ಕೃಷಿ ಮಾಡಿಕೊಂಡು ತಮ್ನ ಜೀವನ ಸಾಗಿಸುತ್ತಿದ್ದಾರೆ.

ತಮ್ಮ 2 ಎಕರೆ 8 ಗುಂಟೆಯಲ್ಲಿ ವಿವಿಧ ರೀತಿಯ ಫಸಲನ್ನು ಬೆಳೆದು ಲಕ್ಷ ಗಂಟಲೇ ಆದಾಯ ಗಳಿಸುತ್ತಿದ್ದಾರೆ. ತಮ್ಮ ಎರಡು ಎಕರೆ ಭೂಮಿಯ ಜೊತೆಗೆ ಲಾವಣಿಯ ರೂಪದಲ್ಲಿ 14 ಎಕರೆ ಜಮೀನಿನಲ್ಲಿ ಅಲಸಂಧಿ, ತೊಗರಿ,ಚವಳಿಕಾಯಿ,ಗಲಾಟೆ ಹೂವು, ಶೇಂಗಾ, ಜೋಳ ಇನ್ನು ಹತ್ತು ಹಲವು ಫಸಲನ್ನು ಬೆಳೆದು ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ. ಗಂಡ ಮಾಡುವ ಎಲ್ಲ ಕೆಲಸವನ್ನು ಲಕ್ಷ್ಮವ್ವ ಮಾಡುತ್ತಾಳೆ. ಎತ್ತುಗಳನ್ನು ತೊಳೆಯುವುದು. ಭೂಮಿ ಉಳುಮೆ, ಬಿತ್ತನೆ ಮಾಡುವುದು, ಚಕ್ಕಡಿ ಹೊಡೆಯುವುದು ಎಲ್ಲ ಕೆಲಸವನ್ನು ಒಬ್ಬಳ್ಳೆ ಮಾಡುತ್ತಾಳೆ ಇನ್ನೂ ಹನಿ ನೀರಾವರಿ ಕೆಲಸವನ್ನು ಮಾಡುತ್ತಾಳೆ.

ಒಟ್ಟಿನಲ್ಲಿ ಕೈ ಕೆಸರಾದರೇ ಬಾಯಿ ಮೊಸರು ಎಂದುಕೊಂಡಿರುವ ಈ‌ ಮಹಾತಾಯಿ‌ ನಿಜಕ್ಕೂ ದೇಶದ ಬೆನ್ನೆಲುಬು ಮಾತ್ರವಲ್ಲದೆ ಅನ್ನ ಹಾಕುವ ಅನ್ನದಾತೆ ಇಂತಹ ಮಹಿಳೆಯರಿಗೆ ಹಾಗೂ ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆ ಶುಭಾಶಯಗಳು.

Edited By : Nagesh Gaonkar
PublicNext

PublicNext

08/03/2022 03:18 pm

Cinque Terre

50.83 K

Cinque Terre

3

ಸಂಬಂಧಿತ ಸುದ್ದಿ