ಭೋಪಾಲ್: ವ್ಯಕ್ತಿಯೊಬ್ಬರು ತಮ್ಮ ಪ್ರಾಣ ಪಣಕ್ಕಿಟ್ಟು ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಈ ಘಟನೆಯು ಫೆಬ್ರವರಿ 5ರಂದು ರಾತ್ರಿ 8 ಗಂಟೆ ಸುಮಾರಿಗೆ ಬರ್ಖೇಡಿಯಲ್ಲಿ ನಡೆದಿದ್ದು, ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ಷಣೆ ಮಾಡಿದ ವ್ಯಕ್ತಿಯ ಮೊಹಮ್ಮದ್ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕಾರ್ಪೆಂಟರ್ ಆಗಿರುವ ಮೊಹಮ್ಮದ್ ಮೆಹಬೂಬ್ ಅವರು ನಮಾಜ್ ಮಾಡಿದ ನಂತರ ಘಟನಾ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದರು.
ಗೂಡ್ಸ್ ರೈಲು ಬರುತ್ತಿದ್ದಾಗ 20ರ ಹರೆಯದ ಮಹಿಳೆಯೊಬ್ಬರು ಬೆನ್ನಿನ ಮೇಲೆ ಹೊರೆಯನ್ನು ಹೊತ್ತುಕೊಂಡು ರೈಲ್ವೆ ಹಳಿ ದಾಟುತ್ತಿದ್ದರು. ಆದರೆ ಏಕಾಏಕಿ ರೈಲು ನೋಡಿದ ಮಹಿಳೆಯು ಭಯಭೀತರಾಗಿ ಹಳಿಗಳ ಮೇಲೆ ಮುಗ್ಗರಿಸಿ ಬಿದ್ದಾಳೆ. ಮಹಿಳೆಯನ್ನು ನೋಡಿ ಮೊಹಮ್ಮದ್ ತಕ್ಷಣವೇ ಟ್ರ್ಯಾಕ್ ನಡುವೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ. ರೈಲು ಅವರ ಮೇಲೆ ಹಾದುಹೋಗುತ್ತಿದ್ದಂತೆ ತಲೆ ಎತ್ತದಂತೆ ತಡೆದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
13/02/2022 09:47 pm