ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಗೋಕಾಕ್ ಫಾಲ್ಸ್‌ ನೋಡಲು ಹೋಗಿ ಕಂದಕಕ್ಕೆ ಉರುಳಿದ ಯುವಕ: ಪವಾಡ ಸದೃಶ ಪಾರು

ಬೆಳಗಾವಿ :140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಪವಾಡಸದೃಶ ಎಂಬಂತೆ ಯುವಕನೋರ್ವ ಬದುಕಿ ಬಂದಿರುವ ಘಟನೆ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ನಡೆದಿದೆ.

ಪ್ರದೀಪ್ ಸಾಗರ್ ಎಂಬ ಯುವಕ ನಿನ್ನೆ ಸ್ನೇಹಿತರೊಂದಿಗೆ ಸೇರಿಕೊಂಡು ಗೋಕಾಕ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಆದರೆ

ಆಯತಪ್ಪಿ ನಿನ್ನೆ ಸಂಜೆ 140 ಅಡಿ ಆಳದ ಕಂದಕಕ್ಕೆ ಬಿದ್ದದ್ದ. ಈತನನ್ನು ರಕ್ಷಿಸಲು ತಕ್ಷಣ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಶೋಧ ಕಾರ್ಯ ಆರಂಭಿಸಿದ್ದ ಗೋಕಾಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ‌ ಸಿಬ್ಬಂದಿಗಳು ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ‌‌ಸ್ಥಗಿತಗೊಳಿಸಿ ವಾಪಸ್ ತೆರಳಿದ್ರು.

ರಾತ್ರಿ ಇಡೀ ಕಂದಕದಲ್ಲೇ ಕಳೆದ ಈತ ಇಂದು ಬೆಳಗಿನಜಾವ 4 ಗಂಟೆಗೆ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾನೆ.

ಬಳಿಕ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡದಿಂದ ಪ್ರದೀಪನನ್ನು ರಕ್ಷಣೆ ಮಾಡಿ

ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Manjunath H D
PublicNext

PublicNext

03/10/2021 11:49 am

Cinque Terre

119.21 K

Cinque Terre

4

ಸಂಬಂಧಿತ ಸುದ್ದಿ