ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನನ್ನು ಅಗಲಿದ ಮಗ ಮುಗಿಲು ಮುಟ್ಟಿದ ಆಕ್ರಂದನ : ಅಂತಿಮ ದರ್ಶನಕ್ಕೂ ಆಸ್ಪದವಿಲ್ಲ

ಬೆಳಗಾವಿ : ಡೆಡ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಮಗನ ಅಕಾಲಿಕ ಮರಣದಿಂದ ತೀವ್ರ ದಿಗ್ಬ್ರಮೆಗೆ ಒಳಗಾಗಿರುವ ಅವರ ತಾಯಿ ಸೋಮವ್ವ ಅಂಗಡಿ, ಅಕ್ರಂದ್ರನ ಮುಗಿಲು ಮುಟ್ಟಿದೆ.

'ನನ್ನ ಮಗ ಮನೆಗೆ ಬಂದೇ ಬರುತ್ತಾನೆ' ದೆಹಲಿಗೆ ಹೋಗಿ ಬರತ್ತೇನೆ ಅಂತಾ ಹೇಳಿ ಹೋಗಿದ್ದಾನೆ ಅವನು ವಾಪಸ್ಸ್ ಬಂದೆ ಬರತ್ತಾನೆ ಎಂದು ತಾಯಿ ಕಣ್ಣೀರಿಡುತ್ತಿರುವ ದೃಶ್ಯ ನಿಜಕ್ಕೂ ಹೃದಯ ಹಿಂಡುವಂತಿದೆ.

ಇನ್ನೂ ಈ ತಾಯಿಯ ಪಾಡು ಬೇರಾವ ತಾಯಿಯಂದಿರಿಗೂ ಬಾರದಿರಲಿ ಕೋವಿಡ್ ಕಾರಣ ಮಗನ ಅಂತಿಮ ದರ್ಶನದ ಭಾಗ್ಯವನ್ನು ಕಳೆದುಕೊಂಡಿದ್ದಾರೆ.

ನೋವಿನ ಕಡಲಲ್ಲಿ ಮುಳುಗಿರುವ ಸುರೇಶ ಅವರ ತಾಯಿಗೆ ಸಾಂತ್ವನ ಹೇಳುವ ಕೆಲಸವನ್ನು ಬಂಧುಗಳು ಮಾಡುತ್ತಿದ್ದಾರಾದರೂ ಸಮಾಧಾನಪಡಿಸಲು ಸಾಧ್ಯವಾಗುತ್ತಿಲ್ಲ. ಅವರೊಂದಿಗೆ ತಾವೂ ಕಣ್ಣೀರಾಗುತ್ತಿದ್ದಾರೆ.

ವಯಸ್ಸಾದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗುವುದಕ್ಕೆ ಕುಟುಂಬದವರಿಗೆ ಸಾಧ್ಯವಾಗಿಲ್ಲ. ಪುತ್ರನ ಹಠಾತ್ ನಿಧನದಿಂದ ಅವರು ದಿಗ್ಭ್ರಮೆಗೆ ಒಳಗಾಗಿದ್ದಾರೆ.

'ಪಾರ್ಲಿಮೆಂಟ್ನ್ಯಾಗ ರೊಕ್ಕಿಲ್ಲ, ನಾ ಹೋಗ್ಬೇಕು. ತಿಂಗಳಾದ್ಮ್ಯಾಲ ಬರ್ತೀನಂತ ಹೋಗಿದ್ದ ನನ್ಮಗ. ಹ್ಯಾಂಗ್ ಹೋದ್ಯೋ... ಎಲ್ ಹೋದ್ಯೋ...' ತಾಯಿ ಮಗನನ್ನು ನೆನೆಯುತ್ತಿರುವ ಪರಿ ಕರಳು ಹಿಂಡಿದಂತಿದೆ.

Edited By : Nirmala Aralikatti
PublicNext

PublicNext

24/09/2020 12:35 pm

Cinque Terre

85.72 K

Cinque Terre

22