ಯಾದಗಿರಿ- ಮಾಹಾಮಾರಿ ಕೊರೊನಾ ಭಯಕ್ಕೆ ಒಂದೆಡೆ ಶಾಲೆಗಳು ಶುರುವಾಗುತ್ತಿಲ್ಲ. ಇನ್ನೊಂದೆಡೆ ಮಕ್ಕಳು ದುಡಿಯುವುದು ತಪ್ಪುತ್ತಿಲ್ಲ.
ಹೌದು! ಲಾಕ್ ಡೌನ್ ಪರಿಣಾಮದಿಂದ ಉದ್ಯೋಗ ನಷ್ಟವಾಗಿದ್ದು ನಿಮಗೆಲ್ಲ ಗೊತ್ತಿದೆ. ಅಷ್ಟೇ ಅಲ್ಲ. ಕಡುಬಡವರ ಮಾಸಿಕ ವರಮಾನ ಕೂಡ ಧಿಡೀರನೇ ನಿಂತು ಹೋಗಿದೆ. ಹೇಗೋ ಕಷ್ಟ ಪಟ್ಟು ಬೇರೆಡೆ ಕೆಲಸ ಹಿಡಿದರೂ ಅಲ್ಲಿ ಸಿಗುವ ಕೂಲಿ ಒಂದಕ್ಕಾದರೆ ಇನ್ನೊಂದಕ್ಕಿಲ್ಲ ಎಂಬಂತೆ ಸಿಗುತ್ತಿದೆ.
ಪರಿಸ್ಥಿತಿ ಈ ಮಟ್ಟಿಗೆ ಹೀನಾಯವಾಗಿರುವಾಗ ಬಡಮಕ್ಕಳು ಸಣ್ಣ ಪುಟ್ಟ ದುಡಿಮೆ ಆರಂಭಿಸಿದ್ದಾರೆ. ತರಕಾರಿ ಮಾರಾಟ, ಹೂವು ಮಾರಾಟ, ಟೀ ಅಂಗಡಿಯಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ, ಹೊಲಗದ್ದೆಗಳಲ್ಲಿ ದುಡಿಯಲಾರಂಭಿಸಿದ್ದಾರೆ. ಹೀಗೆ ದುಡಿಯುತ್ತಿರುವ ಮಕ್ಕಳು ಕುಟುಂಬ ದೈನಂದಿನ ಖರ್ಚು ನಿಭಾಯಿಸಲು ತಮ್ಮ ಹೆತ್ತವರಿಗೆ ನೆರವಾಗುತ್ತಿದ್ದಾರೆ.
ಇದರ ಘೋರ ವಾಸ್ತವವನ್ನು ಅರಿತುಕೊಂಡು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಮಕ್ಕಳ ದುಡಿಮೆ ತಪ್ಪಿಸಲು ಪರ್ಯಾಯ ಮಾರ್ಗ ಯೋಜಿಸಬೇಕಿದೆ.
PublicNext
02/11/2020 02:15 pm