ಲಂಡನ್ : 'ಜೇಮ್ಸ್ ಬಾಂಡ್' ಸರಣಿಯ ಏಳು ಆವೃತ್ತಿಗಳಲ್ಲಿ ನಟಿಸಿದ್ದ ಜನಪ್ರಿಯ ಬ್ರಿಟಿಷ್ ನಟ ಶಾನ್ ಕಾನರಿ (90) ಇನ್ನಿಲ್ಲ.
ಅತ್ಯದ್ಭುತ ಸಾಹಸಗಳ ಮೂಲಕ ಜೀವ ಪಣಕ್ಕಿಟ್ಟು ದೊಡ್ಡ ದೊಡ್ಡ ಕಾರ್ಯಾಚರಣೆಗಳ ವಿರುದ್ಧ ತನ್ನದೇ ಸ್ಟೈಲ್ ನಲ್ಲಿ ಹೋರಾಡುವ ಪಾತ್ರವೇ ಜೇಮ್ಸ್ ಬಾಂಡ್.
ಸರ್ ಶಾನ್ ಅವರ ಪುತ್ರ ಜೇಸನ್ ಬಿಬಿಸಿಗೆ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದ್ದಾರೆ. 'ಬಹಾಮಾಸ್ ನಲ್ಲಿದ್ದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರು ಇಂದು ಶನಿವಾರ ಚಿರನಿದ್ರೆಗೆ ಜಾರಿದ್ದಾರೆ,' ಎಂದು ಜೇಸನ್ ಹೇಳಿದ್ದಾರೆ.
ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಶಾನ್ ಕಾನರಿ ಅವರು ಆಸ್ಕರ್, ಮೂರು 'ಗೋಲ್ಡನ್ ಗ್ಲೋಬ್ಸ್' ಮತ್ತು ಎರಡು 'ಬಾಫ್ಟಾ" ಪ್ರಶಸ್ತಿಗಳೂ ಸೇರಿ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
1988 ರಲ್ಲಿ ಶಾನ್ ಕೊನೆರಿಗೆ ದಿ ‘ದಿ ಅನ್ ಟಚ್ ಬಲ್ಸ್‘ ಸಿನಿಮಾದ ಪೋಷಕ ಪಾತ್ರಕ್ಕಾಗಿ ಆಸ್ಕರ್ ಒಲಿದುಬಂದಿತ್ತು. ಅಲ್ಲದೇ ಎರಡು ಬಾಫ್ತಾ ಮತ್ತು ಮೂರು ಬಾರಿ ಗೋಲ್ಡನ್ ಗ್ಲೋಬ್ ವಿಜೇತರಾಗಿದ್ದರು.
PublicNext
31/10/2020 08:50 pm