ಬೆಂಗಳೂರು: ಆಧುನಿಕ ಶ್ರವಣಕುಮಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಬೋಗಾದಿ ನಿವಾಸಿ ಕೃಷ್ಣಕುಮಾರ್ ಅವರಿಗೆ ಮಹೀಂದ್ರ ಕಂಪನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ.
ಕೃಷ್ಣಕುಮಾರ್ ಅವರು ತಮ್ಮ ತಂದೆ ಕೊಡಿಸಿದ್ದ 20 ವರ್ಷದ ಹಳೆಯ ಬಜಾಜ್ ಸ್ಕೂಟರ್‌ನಲ್ಲಿ ತಾಯಿಯನ್ನ ಕೂರಿಸಿಕೊಂಡು ಕಾಶ್ಮೀರದಿಂದ ಕನ್ಯಾಕುಮಾರಿ ತನಕ 52 ಸಾವಿರ ಕಿ.ಮೀ. ಯಾತ್ರೆ ಮಾಡಿದ್ದಾರೆ. ತಾಯಿಯ ಇಂಗಿತದಂತೆ ಸ್ಕೂಟರ್‌ನಲ್ಲಿ ದೇಶದ ನಾನಾ ಭಾಗಗಳಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಆಧುನಿಕ ಶ್ರವಣಕುಮಾರ ಎನಿಸಿಕೊಂಡಿರುವ ಕೃಷ್ಣಕುಮಾರ್ ನಾಲ್ಕು ದಿನದ ಹಿಂದೆಯಷ್ಟೇ ಮೈಸೂರಿಗೆ ಆಗಮಿಸಿದ್ದರು. ಈ ವಿಷಯ ತಿಳಿದ ಮಹೇಂದ್ರ ಕಂಪನಿಯು ತನ್ನ ಕಡೆಯಿಂದ ಕೆಯುವಿ-100 ಕಾರನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಮಾಲೀಕ ಆನಂದ್ ಮಹೇಂದ್ರ ಈ ಮುಂಚೆಯೇ ಹೇಳಿದಂತೆ ಯಾತ್ರೆ ಮುಗಿಸಿ ಹಿಂದಿರುಗಿದ ಕೃಷ್ಣಕುಮಾರ್ ಅವರಿಗೆ ಕಾರು ನೀಡಿದ್ದಾರೆ.
PublicNext
20/09/2020 03:58 pm