ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ 33/11 ಕೆವಿ ವಿದ್ಯುತ್ ಮಾರ್ಗದ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ಕೆಲಸದ ಅಂಗವಾಗಿ ಮೇ.31 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
11 ಕೆವಿ ಮಾರ್ಗಗಳಾದ ಲೋಕೂರು, ಕೊಟಬಾಗಿ, ಉಪ್ಪಿನ ಬೆಟಗೇರಿ, ಯಾದವಾಡ, ಕಬ್ಬೇನೂರು, ಹಾರೋಬೆಳವಡಿ ಮತ್ತು ಶಿಬಾರಗಟ್ಟಿ ಗ್ರಾಮಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತದ ಪ್ರಕಟಣೆ ತಿಳಿಸಿದೆ.
Kshetra Samachara
30/05/2022 06:35 pm