ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಹಜರತ್ ರುಸ್ತುಂ ಶಹಿದ ದರ್ಗಾದಲ್ಲಿ ಪವಿತ್ರ ಮೆಕ್ಕಾ, ಮದೀನಾ ದರ್ಶನ

ಕಲಘಟಗಿ: ಪಟ್ಟಣದ ಹಜರತ್ ರುಸ್ತುಂ ಶಹಿದ ದರ್ಗಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉರುಸ್ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.

ಇಸ್ಲಾಂ ಧರ್ಮದ ಪವಿತ್ರ ಸ್ಥಳ ಮೆಕ್ಕಾ ಮತ್ತು ಮದೀನಾ ಮಸೀದಿ ಸೌದಿ ಅರೇಬಿಯಾದಲ್ಲಿದ್ದು, ಭಾರತದ ಲಕ್ಷಾಂತರ ಮುಸಲ್ಮಾನರು ಅಲ್ಲಿಗೆ ಹಜ್ ಯಾತ್ರೆಯ ಮೂಲಕ ಹೋಗ್ತಾರೆ. ಆದರೆ ಕಲಘಟಗಿ ಅಂಜುಮನ್ ಸಂಸ್ಥೆಯವರು ರುಸ್ತುಂ ಶಹಿದ ದರ್ಗಾದಲ್ಲಿ ಈ ಬಾರಿ ಉರುಸ್ನಲ್ಲಿ ಪವಿತ್ರ ಮೆಕ್ಕಾ ಮದೀನಾವನ್ನು ತಯಾರಿಸಿ ಸಾರ್ವಜನಿಕರಿಗೆ ಮೂರು ದಿನಗಳ ಕಾಲ ದರ್ಶನಕ್ಕೆ ಅವಕಾಶ ನೀಡಿದ್ದಾರೆ.

ರವಿವಾರದಿಂದ ಪ್ರಾರಂಭವಾದ ಉರುಸ್ ಮಂಗಳವಾರ ಅಂತ್ಯಗೊಳ್ಳಲಿದೆ. ಈಗಾಗಲೆ ಕಲಘಟಗಿ ಹಾಗೂ ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಜನತೆ ಈ ಮೆಕ್ಕಾ ಮದೀನಾ ದರ್ಶನ ಪಡೆಯಲು ಆಗಮಿಸುತ್ತಿದ್ದು. ದರ್ಶನಕ್ಕೆ ಆಗಮಿಸುತ್ತಿರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದ್ದು ವಿಶೇಷವಾಗಿದೆ.

-ಉದಯ ಗೌಡರ

Edited By : Shivu K
Kshetra Samachara

Kshetra Samachara

10/10/2022 01:40 pm

Cinque Terre

43.76 K

Cinque Terre

0

ಸಂಬಂಧಿತ ಸುದ್ದಿ