ಹುಬ್ಬಳ್ಳಿ: ಅತಿ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ ರಾಣಿ ಚನ್ನಮ್ಮ ಈದ್ಗಾ ಮೈದಾನ ಗಣೇಶ ಪ್ರತಿಷ್ಠಾಪನೆ, ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಗಣಪತಿ ವಿಸರ್ಜನೆಯೊಂದಿಗೆ ಇಂದು ಅಂತ್ಯವಾಗಲಿದ್ದು, ಡೊಳ್ಳು, ಮೇಳ, ಭಾಜಾ ಭಜಂತ್ರಿಯಿಂದ ಅತಿ ವಿಜೃಂಭಣೆಯಿಂದ ಮೆರವಣಿಗೆ ನಡೆಯುತ್ತಿದೆ.
ಒಂದು ಕಡೆ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ರೆ, ಇನ್ನೊಂದು ಕಡೆ ಮೈದಾನದಲ್ಲಿ ಗಣಪತಿ ಕೂರಿಸಲಾಗಿದ್ದ ಪೆಂಡಾಲ್‌ನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಒಟ್ಟಿನಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳ ಮುಟ್ಟುವುದರೊಳಗಾಗಿ ಇತ್ತ ಸಂಪೂರ್ಣವಾಗಿ ಪೆಂಡಾಲ್ ತೆರವುಗೊಳ್ಳಲಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದು, ಮೈದಾನದಲ್ಲಿ ಹಾಕಿದ್ದ ಪೆಂಡಾಲ್ ಕೂಡ ಅಷ್ಟೇ ವೇಗವಾಗಿ ತೆರವುಗೊಳಿಸಲಾಗುತ್ತಿದೆ.
Kshetra Samachara
02/09/2022 01:55 pm