ನವಲಗುಂದ: ತಾಲೂಕಿನ ಹಲವೆಡೆ ಮೊಹರಂ ಹಬ್ಬದ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು. ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬದ ಕತ್ತಲ ರಾತ್ರಿ ಆಚರಣೆಯನ್ನು ಸರ್ವಧರ್ಮೀಯರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುವುದರೊಂದಿಗೆ ಪಾಂಜಾ ಪೂಜೆಯಲ್ಲಿ ದಿ. ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೂ ಗೌರವ ಸಲ್ಲಿಸಿದರು.
ಪ್ರವಾದಿ ಮೊಹಮದ್ ಅವರ ಮೊಮ್ಮಕ್ಕಳಾದ ಹಸನ್ ಹಾಗೂ ಹುಸೇನ್ ಅವರ ಬಲಿದಾನದ ಪ್ರತೀಕವಾಗಿ ಆಚರಿಸಲಾಗುವ ಈ ಮೊಹರಂ ಆಚರಣೆಯಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಪಾಲ್ಗೊಂಡು ಸಂಭ್ರಮದಿಂದ ಆಚರಣೆ ಮಾಡಲಾಗುತ್ತೆ.
ಇನ್ನು ರಾತ್ರಿ ಎರಡು ಗಂಟೆಗೆ ಪಟ್ಟಣದ ಕಳ್ಳಿಮಠದ ಕಿರುವಳ್ಳಮ್ಮ ಡೋಲಿ ದೇವರು ಮಾರುಕಟ್ಟೆಗೆ ತೆರಳಿತು. ಮಾರುಕಟ್ಟೆಯಲ್ಲಿ ಇಮಾಮ್ ದೇವರು ಹಾಗೂ ಕಿರುವಳ್ಳಮ್ಮ ಡೋಲಿ ಎರಡು ಭೇಟಿಯಾಗಿ ಗಣಪತಿ ದೇವಸ್ಥಾನಕ್ಕೆ ಮುಖ ತೋರಿಸುವ ಮೂಲಕ ಸಾಮರಸ್ಯ ಮೆರೆಯುತ್ತವೆ. ನಂತರ ಪಟ್ಟಣದ ಎಲ್ಲಾ ದೇವರು ಚೌಡಿ ಬಯಲಿಗೆ ಆಗಮಿಸಿ, ಬೆಳಗಿನ ಜಾವ ಆರು ಗಂಟೆಗೆ ಮತ್ತೆ ತಮ್ಮ ತಮ್ಮ ಸ್ಥಳಗಳಿಗೆ ತೆರಳಿವೆ. ಇಂದು ರಾತ್ರಿ ಕೂತ ದೇವರುಗಳು ಹೊಳೆಗೆ ತೆರಳುತ್ತವೆ.
Kshetra Samachara
09/08/2022 12:02 pm