ನವಲಗುಂದ : ನವಲಗುಂದ ಪಟ್ಟಣದ ಪುರಾತನ ಶ್ರೀ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಿಂದ 3ಲಕ್ಷ ಮೊತ್ತದ ಡಿ.ಡಿ ಅನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರಿಗೆ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗ್ರಾಮಾಭಿವೃದ್ದಿ ಯೋಜನೆಯ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಡಾ॥ ಡಿ ವೀರೇಂದ್ರ ಹೆಗ್ಗಡೆಯವರು ಸಹಕಾರ ನೀಡುತ್ತಾ ಬಂದಿದ್ದು, ಈ ನಿಮಿತ್ತ ಶ್ರೀ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯಧನ ಮಾಡಿದ್ದಾರೆ.
ಶ್ರೀ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ವಿನಾಯಕ ಪೇಟೆ ನವಲಗುಂದ ತಾಲೂಕು ಇವರಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ವೀರೇಂದ್ರ ಹೆಗ್ಗಡೆಯವರಲ್ಲಿ ಧನಸಹಾಯಕ್ಕಾಗಿ ಅರ್ಜಿ ನೀಡಲಾಗಿತ್ತು. ಈ ಹಿನ್ನೆಲೆ ಕಾಮಗಾರಿಯ ದಾಖಲಾತಿಯನ್ನು ಪರಿಶೀಲಿಸಿ, 3ಲಕ್ಷ ಮೊತ್ತದ ಡಿ.ಡಿ ಅನ್ನು ಗದಗ ಜಿಲ್ಲಾ ನಿರ್ದೇಶಕರಾದ ಡಾ. ಯೋಗಿಶ್ ಅವರು ವಿತರಿಸಿ, ಯೋಜನೆಯ ಇತರೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನವಲಗುಂದ ತಾಲೂಕಿನ ಯೋಜನಾಧಿಕಾರಿ ಓo ಮರಾಠೆ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ದೇವಸ್ಥಾನ ಸಮಿತಿಯ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖ ಗುರುಹಿರಿಯರು, ವಲಯದ ಮೇಲ್ವಿಚಾರಕ ಗಜಾನನ ಪಟಗಾರ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
17/06/2022 12:08 pm