ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಧರ್ಮದಂಗಲ್ ಗೆ ಪೊಲೀಸ್ ಮದ್ದು: ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಶಾಂತಿ ಸಭೆ

ಹುಬ್ಬಳ್ಳಿ : ಬಿಜೆಪಿ ಮಾಜಿ ವಕ್ತಾರೆ ನುಪರ್ ಶರ್ಮಾ ಧರ್ಮ ಗುರುಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎದ್ದಿರುವ ಪ್ರತಿಭಟನೆ ,ಹಿಂಸಾಚಾರ ಹಿನ್ನಲೆಯಲ್ಲಿ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಹುಬ್ಬಳ್ಳಿ ಧಾರವಾಡದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗಳಿಗೆ ನೀಡಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ.

ಹುಬ್ಬಳ್ಳಿ- ಧಾರವಾಡ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಇನ್ಸ್ ಪೆಕ್ಟರ್ ಗಳು ಕಾರ್ಯಪ್ರವರ್ತರಾಗಿದ್ದು ತಮ್ಮ ಲಿಮಿಟ್ಸ್ ನ ಎಲ್ಲಾ ಹಿಂದೂ-ಮುಸ್ಲಿಂ ಸಮಾಜದ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಿ ಸೌಹಾರ್ದತೆಯನ್ನು ಕಾಪಾಡುವಂತೆ ಸೂಚನೆ ನೀಡಿದ್ದಾರೆ.

ನಗರದ ಗೋಕುಲ ರೋಡ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜೆ ಎಂ ಕಾಲಿಮಿರ್ಚಿ ತಮ್ಮ ವ್ಯಾಪ್ತಿಯ ಎಲ್ಲಾ ಸಮಾಜದ ಮುಖಂಡರನ್ನ ಕರೆಯಿಸಿದ್ದರು,ಇತ್ತೀಚೆಗೆ ದೇಶದಲ್ಲಿ ಕೋಮು ಗಲಭೆ ಹಿನ್ನಲೆ ಹೆಚ್ಚಾಗಿದ್ದು ಇಂತಹ ವಿಷಯಗಳ ಕುರಿತು ತಮ್ಮ ಏರಿಯಾಗಳಲ್ಲಿ ಚರ್ಚೆ ಮಾಡುವುದು ,ವಾಗ್ವಾದ ಮಾಡುವುದು ಮಾಡಬಾರದು, ಓಣಿಯಲ್ಲಿ ಎಲ್ಲರೂ ಸೌಹಾರ್ದತವಾಗಿ ಸಹೋದರಂತೆ ಬಾಳಬೇಕು ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

12/06/2022 03:32 pm

Cinque Terre

22.53 K

Cinque Terre

0

ಸಂಬಂಧಿತ ಸುದ್ದಿ