ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನಮಾಜ್ ಮುಗಿಸಿ ಬಂದವರಿಗೆ ಮಾವಿನ ಸೀಕರಣಿ ವಿತರಿಸಿದ ಹಿಂದೂಗಳು

ನವಲಗುಂದ: ನವಲಗುಂದ ಪಟ್ಟಣದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ಬಾಂಧವರಿಂದ ಬೃಹತ್ ಸಾಮೂಹಿಕ ನಮಾಜ್ ನೆರವೇರಿತು. ನಮಾಜ್ ಮುಗಿಸಿ ಹೊರಬಂದ ಮುಸ್ಲಿಂ ಬಾಂಧವರಿಗೆ ಹಿಂದೂ ಬಾಂಧವರು ಮಾವಿನ ಹಣ್ಣಿನ ಶೀಕರಣಿ ಹಂಚುವ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಎತ್ತಿಹಿಡಿದರು.

ನಮಾಜ್ ಮುಗಿಸಿ ಬಂದ ಮುಸ್ಲಿಂ ಬಾಂಧವರಿಗೆ ಮಂಜುನಾಥ ನಗರದಲ್ಲಿ ಯುವ ರೈತರಾದ ಮೈಲಾರಪ್ಪ ಕುಬೇರಪ್ಪ ವೈದ್ಯ ಅವರ ನೇತೃತ್ವದಲ್ಲಿ ಸುಮಾರು ಹದಿನೈದು ನೂರು ಮುಸ್ಲಿಂ ಬಾಂಧವರಿಗೆ ಸೀಕರಣಿ ಹಂಚುವ ಮೂಲಕ ನವಲಗುಂದ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

Edited By : Shivu K
Kshetra Samachara

Kshetra Samachara

03/05/2022 04:29 pm

Cinque Terre

21.89 K

Cinque Terre

2

ಸಂಬಂಧಿತ ಸುದ್ದಿ