ಧಾರವಾಡ: ಮಂಗಳವಾರ ನಾಡಿನಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು, ಎಲ್ಲರೂ ಖುಷಿಯಿಂದ ಹಬ್ಬ ಆಚರಿಸುವಂತಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ಮಕ್ತುಂ ಸೊಗಲದ ಹಾಗೂ ಅವರ ಗೆಳೆಯರ ಬಳಗದವರು ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಸೀರೆ ವಿತರಿಸಿದ್ದಾರೆ.
ಧಾರವಾಡದ ಟೋಲನಾಕಾ ಬಳಿ ಇರುವ ಮಕ್ತುಂ ಸೊಗಲದ ಅವರ ನಿವಾಸದೆದುರು ಬಡ ಮುಸ್ಲಿಂ ಕುಟುಂಬಗಳಿಗೆ ಈ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗಿದೆ. ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಕಿಟ್‌ಗಳನ್ನು ವಿತರಿಸಿ ರಂಜಾನ್ ಹಬ್ಬದಂದು ಇವರು ಸಾರ್ಥಕತೆ ಮೆರೆದಿದ್ದಾರೆ.
ಅಲ್ಲದೇ ಹಬ್ಬದಂದು ಬಟ್ಟೆ ಖರೀದಿ ಮಾಡಲಾಗದೇ ಇದ್ದ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸೀರೆಗಳನ್ನೂ ವಿತರಿಸಿ ಎಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸುವಂತೆ ಮಾಡಿದ್ದಾರೆ. ಸೊಗಲದ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
03/05/2022 07:54 am