ಧಾರವಾಡ: ಹನುಮ ಜಯಂತಿ ಅಂಗವಾಗಿ ಆಂಜನೇಯ ದೇವಸ್ಥಾನಗಳಲ್ಲಿ ಆಂಜನೇಯ ಸ್ವಾಮಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕದಿಂದ ಅಲಂಕಾರಗೊಳಿಸಿ ಹನುಮಾನ್ ಜಯಂತಿ ಸಂಭ್ರಮದಿಂದ ಆಚರಣೆ ನಡೆಸಿದ್ದಾರೆ.
ಅದರಂತೆ ಧಾರವಾಡದ ಮಾಳಾಪುರದ ರಾಜನಗರದಲ್ಲಿ ಹನುಮಾನ್ ಜಯಂತಿ ಹಿನ್ನೆಲೆ ವೀರಾಂಜನೇಯ ಸ್ವಾಮಿಗೆ ಎಳ್ಳುಗಳಿಂದ ಅಲಂಕಾರ ಮಾಡಿ ಯುವತಿಯರು ವಿಶೇಷ ಪೂಜೆ ಸಲ್ಲಿಸಿ ಆಂಜನೇಯ ಕೃಪೆಗೆ ಪಾತ್ರರಾದರು. ಇಂತಹ ಯುವಕರು ಜಾಂಜ್ ಮೇಳದೊಂದಿಗೆ ಕೈಯಲ್ಲಿ ಶ್ರೀರಾಮ ಬಾವುಟ ಹಿಡಿದು ಮಾಳಾಪುರ ವೀರಾಂಜನೇಯನ ಬೃಹತ್ ಶೋಭಾಯಾತ್ರೆ ನಡೆಸಿದರು.
ಮಾಳಾಪುರ ವೀರಾಂಜನೇಯನ ಶೋಭಾಯಾತ್ರೆಗೆ ಹಿರಿಯರು ವಿಚಾರದಂತೆ ಚಕ್ಕಡಿ ಬಂಡೆಯಲ್ಲಿ ಆಂಜನೇಯ ಸ್ವಾಮಿ, ಶ್ರೀರಾಮ ದೇವರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾ, ಬೃಹತ್ ಶೋಭಾಯಾತ್ರೆ ನಡೆಸುವ ಮೂಲಕ ಹನುಮಾನ್ ಜಯಂತಿ ಬಾರಿ ವಿಜ್ರಂಭಣೆಯಿಂದ ಆಚರಣೆ ಮಾಡಿದರು. ಇನ್ನು ಮಾಳಾಪುರದ ಹಿರಿಯರಾದ ಶಂಕರ್ ಪಲೋಟಿ, ವಿರೇಶ್ ಜ್ಯೋತಿ, ಮಂಜುನಾಥ್ ನಡಟ್ಟಿ, ಹಾಗೂ ರಾಮ್ ಸೇನಾ ಜಿಲ್ಲಾಧ್ಯಕ್ಷ ವಿಜಯ ಕದಂ ಸೇರಿದಂತೆ ಹಲವು ಪ್ರಮುಖರು ಈ ಶೋಭಾ ಯಾತ್ರೆ ನಡೆಸಿದರು.
Kshetra Samachara
16/04/2022 03:13 pm