ಧಾರವಾಡ: ಇಂದು ನಾಡಿನಾದ್ಯಂತ ಸಂಭ್ರಮದಿಂದ ಹನುಮ ಜಯಂತಿ ಆಚರಿಸಲಾಗುತ್ತಿದೆ. ಆಂಜನೇಯನ ದೇವಸ್ಥಾನದಲ್ಲಿ ಇಂದು ಭಕ್ತ ಸಾಗರ ದರ್ಶನಕ್ಕೆ ಹರಿದು ಬರುತ್ತಿದೆ.
ಅದೇ ರೀತಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲೂ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಆಂಜನೇಯನಿಗೆ ಬೆಳ್ಳಿಯ ಕವಚದಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿರುವ ಚಿಕ್ಕ ಕಲ್ಯಾಣಿಗೆ ಹೊಳೆಯ ನೀರನ್ನು ತಂದು ತುಂಬಿಸಲಾಯಿತು.
ನಂತರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
Kshetra Samachara
16/04/2022 11:18 am